ರಾಮಜನ್ಮಭೂಮಿ ಹಿಂದೂಗಳ ಸ್ವತ್ತು : ಚಿದಾನಂದಮೂರ್ತಿ
ಬೆಂಗಳೂರು,
ಸೆ. 29 : ರಾಮಜನ್ಮಭೂಮಿ ಹಿಂದುಗಳಿಗೆ ಸೇರಿದ್ದು ಎಂದು ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಅಲಹಾಬಾದ್ ಹೈಕೋರ್ಟ್ ಯಾವುದೇ ತೀರ್ಪು ನೀಡಿದರೂ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿರುವುದರಿಂದ ಹಿಂದುಗಳು ಶಾಂತಿಯಿಂದ ಇರಬೇಕು ಎಂದು ಮಾಧ್ಯಮಗಳ ಮುಖಾಂತರ ಅವರು ಮನವಿ ಮಾಡಿಕೊಂಡಿದ್ದಾರೆ. id="toptextpromo">ಅಯೋಧ್ಯೆ
ಹಿಂದುಗಳ ಪವಿತ್ರ ಕ್ಷೇತ್ರ. 10-11ನೇ ಶತಮಾನದ ಕನೋಜ್ ಚಕ್ರವರ್ತಿಗಳ ಕಾಲದಿಂದ ಅಲ್ಲಿ ಹಲವು ದೇವಾಲಯಗಳು ನಿರ್ಮಾಣವಾದವು. ಅದಕ್ಕೂ ಮೊದಲೇ ರಾಮದೇವಾಲಯವಿತ್ತು ಎಂದು ಅವರು ಹೇಳಿದರು. ಕ್ರಿ.ಶ. 1528ರಲ್ಲಿ ದೆಹಲಿಯ ಮೊಘಲ್ ಸಾಮ್ರಾಟ ಬಾಬರನು ಅದನ್ನು ಭಗ್ನಗೊಳಿಸಿ ಮಸೀದಿ ಕಟ್ಟಿಸಿದ. id='are-slot-1' class='oiad oi-axt oiadv'> id='top-searched-articles'>ಆ
ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾದದ್ದು ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ತೀರ್ಪು ಹಿಂದುಗಳ ಪರ ಆಗುವವರೆಗೂ ಹೋರಾಟ ಮಾಡೋಣ. ಆದರೆ, ಸಹನೆ ಕಳೆದುಕೊಂಡು ಹಿಂಸಾಚಾರಕ್ಕೆ ಕೈಹಾಕಬಾರದು ಎಂದರು. ಆತ್ಮಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಆಂದೋಲನ ಹಾಗೂ ಗಲಭೆ ಕುರಿತ ಕೆಲವು ಘಟನೆಗಳನ್ನು ವಿವರಿಸಿದರು. ಹಿಂದು ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ಕಶ್ಯಪ್, ಅಯೋಧ್ಯೆ ಹಿಂದುಗಳ ಪರವಾಗುವವರೆಗೆ ಹೋರಾಡುವುದಾಗಿ ತಿಳಿಸಿದರು.











Click it and Unblock the Notifications