Get Updates
Get notified of breaking news, exclusive insights, and must-see stories!

ಕಟ್ಟಾ ಭೇಟಿ ಸುಳ್ಳು ಎಂದ ಲೋಕಾಯುಕ್ತರು

Lokayukta denies secret meet with Katta
ಬೆಂಗಳೂರು, ಸೆ.28: 'ಕೆಐಎಡಿಬಿಎ ಭೂ ಹಗರಣಕ್ಕೆ ಸಂಬಂಧಿಸಿದಂತೆ ನನ್ನೊಟ್ಟಿಗೆ ಮಾತನಾಡಲು ಯಾವ ಸಚಿವರು ಬಂದಿಲ್ಲ. ಹಾಗೆ ಒಂದು ಪಕ್ಷ ಬಂದರೂ ನನ್ನ ಮೇಲೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ'ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.

ಕೆಐಎಡಿಬಿ ಭೂ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊಂದಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಮಗ ಬಿಬಿಎಂಪಿ ಕಾರ್ಪೊರೇಟರ್ ಜಗದೀಶ್ ಅವರು ಅಪರ ವೇಳೆಯಲ್ಲಿ ಲೋಕಾಯುಕ್ತರನ್ನು ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದನ್ನು ಅಲ್ಲಗೆಳೆದಿರುವ ಸಂತೋಷ್ ಹೆಗ್ಡೆ ಅವರು ಯಾವ ಸಚಿವರು ಭೇಟಿ ಮಾಡಿಲ್ಲ ಎಂದಿದ್ದಾರೆ.

ಕೆಐಎಡಿಬಿ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆದಿದೆ. ಮುಂದಿನ 15 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ. ತನಿಖೆ ನಿಷ್ಪಕ್ಷಪಾತವಾಗಿದ್ದು, ಯಾವುದೇ ಪ್ರಭಾವ ಹಾಗೂ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರ್ಥಿಕ ವಲಯಕ್ಕಾಗಿ ಜಮೀನು ನೀಡಿದವರಿಗೆ ಕೆಐಎಡಿಬಿಯಿಂದ ನೀಡಲಾಗುವ ಪರಿಹಾರದ ಹಣ ಕಟ್ಟಾ ಅವರ ಪುತ್ರನ ಹೆಸರಿಗೆ ವರ್ಗಾವಣೆಯಾಗಿದೆ ಸುಮಾರು 107 ಕೋಟಿ ರೂ.ಗೂ ಅಧಿಕ ಧನ ಅಕ್ರಮವಾಗಿ ಕೈ ಬದಲಾಯಿಸಿದೆ. ಈ ಸಂಬಂಧ ಸಚಿವ ಕಟ್ಟಾ ಹಾಗೂ ಅವರ ಪುತ್ರನ ವಿರುದ್ಧ ಲೋಕಾ ಯುಕ್ತರು ನೋಟಿಸ್ ಜಾರಿ ಮಾಡುವ ಸಂಭವವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+