ಡೇವಿಡ್ ಬೆಕಮ್ ಗೂ ಉಂಟು ವೇಶ್ಯೆ ಸಹವಾಸ?

ಇನ್ ಟಚ್ ಮ್ಯಾಗಜೀನ್ ಪ್ರಕಟಣೆಯಂತೆ, ಇರ್ಮಾ ನಿಸಿ ಎಂಬ ವೇಶ್ಯೆಯೊಂದಿಗೆ ಡೇವಿಡ್ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ. ಆತನ ಜತೆ ಮಾತನಾಡಿದ್ದಕ್ಕೆ ದೂರವಾಣಿ ದಾಖಲೆಗಳಿವೆ. ಡೈರಿ ಪುಸ್ತಕವೊಂದರಲ್ಲಿ ನಮ್ಮ ಸಂಬಂಧದ ಬಗ್ಗೆ ವಿವರಗಳನ್ನು ಬರೆದಿಟ್ಟಿದ್ದೇನೆ ಎಂದು ಇರ್ಮಾ ಹೇಳಿದ್ದಾಳೆ.
ಜರ್ಮನ್ ನ ಹಿರಿಯ ಪ್ರಕಾಶಕ ಹೈಂಜ್ ಬೂಯರ್ ಒಡೆತನದ ಈ ಅಮೆರಿಕನ್ ಮ್ಯಾಗಜೀನ್ ನಲ್ಲಿ ಬಂದಿರುವ ವರದಿಗಳನ್ನು ನೋಡಿ ಬೆಕಮ್ ಕೆಂಡಮಂಡಲವಾಗಿದ್ದಾನೆ.
ಆಧಾರ ರಹಿತ ಲೇಖನವನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು. ಅಥವಾ ಈ ಬಗ್ಗೆ ನನ್ನನ್ನು ಪ್ರಶ್ನಿಸಬಹುದಿತ್ತು. ಇದು ಸತ್ಯಕ್ಕೆ ದೂರವಾದ ಲೇಖನ ಎಂದು ಇನ್ ಟಚ್ ಪತ್ರಿಕೆಗೆ ಗೊತ್ತಿದ್ದರೂ, ಪ್ರಕಟಗೊಂಡಿದ್ದು ಯಾಕೆ ಎಂದು ವಿವರಗಳನ್ನು ಕೇಳಿ 70ವರ್ಷದ ಬೂಯರ್ ಅವರಿಗೆ ಡೇವಿಡ್ ಪತ್ರ ಬರೆದು ಉತ್ತರಕ್ಕೆ ನಿರೀಕ್ಷಿಸುತ್ತಿದ್ದಾರೆ ಎಂದು ಡೈಲಿಮೇಲ್ ವರದಿ ಮಾಡಿದೆ.
35 ವರ್ಷದ ಫುಟ್ಬಾಲ್ ಪಟು ಡೇವಿಡ್ ಬೆಕಮ್ ನ ಕಾನೂನು ತಜ್ಞರು ಕೂಡಾ ಮಿಸ್ ನಿಸಿ ಯಾವುದೇ ಪುರಾವೆ ಒದಗಿಸುವಲ್ಲಿ ವಿಫಲರಾದರೂ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವುದು ಅಕ್ಷಮ್ಯ ಎಂದಿದ್ದಾರೆ. ಮಾಜಿ ಸ್ಪೈಸ್ ಗರ್ಲ್ ತಂಡ ಸದಸ್ಯೆ ವಿಕ್ಟೋರಿಯಾರನ್ನು ಮದುವೆಯಾಗಿ ಬೆಕಮ್ ಸಂಸಾರ ನಡೆಸಿದ್ದರು. ಸುಮ್ಮನೆ ಆವರ ಖಾಸಗಿ ವಿಷಯ ಕೆದಕುವುದು ಮಾಧ್ಯಮಗಳಿಗೆ ಒಂದು ಆಟ ಎಂದು ಬೆಕಮ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications