ಸೆ. 29 ರಂದು ತೀರ್ಪು ನೀಡಲು ಅಡ್ವಾಣಿ ಮನವಿ
ಸೋಮನಾಥ(ಗುಜರಾತ್),
ಸೆ. 26 : ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮಾಲೀಕತ್ವ ಪ್ರಕರಣದ ತೀರ್ಪಿಗೆ ಮಧ್ಯಂತರ ತಡೆ ವಿಧಿಸಿರುವ ಸುಪ್ರೀಂ ಕೋರ್ಟ್‌ನ ನಿರ್ಧಾರಕ್ಕೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ತೀರ್ಪು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವ ಅವರು, ಶಾಂತಿ ಕಾಪಾಡಿ ನ್ಯಾಯಾಲಯವನ್ನು ಗೌರವಿಸುವಂತೆ ಅವರು ಜನತೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. id="toptextpromo">ಇಲ್ಲಿನ
ಪ್ರಸಿದ್ಧ ಶಿವಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅಡ್ವಾಣಿ, ಸುಪ್ರೀಂಕೋರ್ಟ್‌ನ ನಿರ್ಧಾರವನ್ನು ಅರ್ಥೈಸಿಕೊಳ್ಳಲು ಕಷ್ಟವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತೇನೆ. ಆದರೆ, ಜನರೆಲ್ಲ ಅಯೋಧ್ಯೆಯ ಕುರಿತಾದ ತೀರ್ಪನ್ನು ಕಾಯುತ್ತಿರುವಾಗ, ಪ್ರಕರಣದ ಕಕ್ಷಿಗಳೂ ತೀರ್ಪನ್ನು ಬಯಸುತ್ತಿರುವಾಗ ಹಾಗೂ ಅಲಹಾಬಾದ್ ಹೈಕೋರ್ಟ್ ತೀರ್ಪು ಮುಂದೂಡಿಕೆಯ ಮನವಿಯನ್ನು ತಿರಸ್ಕರಿಸಿದ್ದಾಗ ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಹೊರಬಿದ್ದಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಜನರು
ಕಳೆದ 50 ವರ್ಷಗಳಿಂದ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ, ಸೆ.28ರಂದು ಅರ್ಜಿಯ ಅಂತಿಮ ವಿಚಾರಣೆ ನಡೆಸಿ ಸೆ.29ರಂದು ಅಲಹಾಬಾದ್ ಹೈಕೋರ್ಟ್‌ಗೆ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದಾಗಿ ಅವರು ಹೇಳಿದರು.











Click it and Unblock the Notifications