ನಿತ್ಯಾನಂದ ರಾಸಲೀಲೆ ಹೊಸ ಸಿಡಿ ಬಂದಿದೆ

2005ರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಸಿಡಿ ಹಾಗೂ ಹೇಳಿಕೆಗಳನ್ನು ದಾಖಲಿಸಿ ಮೊಹರು ಮಾಡಿದ ಲಕೋಟೆಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಸಿಡಿಯಲ್ಲಿ ಏನಿದೆ ಎಂಬುದು ಗೋಪ್ಯವಾಗಿ ಇಡಲಾಗಿದ್ದು, ಕೋರ್ಟ್ ಆವರಣದಲ್ಲಿದ್ದ ಸಾರ್ವಜನಿಕರ ಕುತೂಹಲ ಕೆರಳಿಸಿತ್ತು.
ನ್ಯಾಯಮೂರ್ತಿ ಅರಳಿ ನಾಗರಾಜ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ಕೈಗೆತ್ತಿಕೊಂಡ ತಕ್ಷಣ ಸಿಐಡಿ ಪೊಲೀಸರು ಮಹಿಳೆಯೊಬ್ಬರು ನೀಡಿದ ಹೇಳಿಕೆ, ಸಿಡಿ ಹಾಗೂ ಮಹತ್ವದ ದಾಖಲೆಗಳನ್ನು ಸಲ್ಲಿಸಿದರು. ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಕೆಯ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂಬ ಸಿಐಡಿ ಪೊಲೀಸರು ಹೇಳಿದರು.
ಆದರೆ, ಹಳೆ ಕೇಸ್ ನ ಸಾಕ್ಷಿಯನ್ನು ತಂದು ಈ ಕೇಸ್ ಗೆ ಜೋಡಿಸುವುದು ಎಷ್ಟು ಸರಿ ಎಂಬ ನಿತ್ಯಾನಂದನ ಪರ ವಕೀಲರ ವಾದಕ್ಕೆ ಉತ್ತರಿಸಿದ ಸಿಐಡಿ ಪರ ವಕೀಲರು, ಸಾಕ್ಷಿಗಳು ಈ ಕೇಸ್ ಗೆ ಪೂರಕವಾಗಿದೆ. ಇದಲ್ಲದೆ ಅಮೆರಿಕದಲ್ಲಿರುವ ನಿತ್ಯಾನಂದನ ಭಕ್ತೆಯೊಬ್ಬರು ತಮ್ಮ ಮೇಲೂ ಅತ್ಯಾಚಾರ ನಡೆದಿದೆ ಎಂದು ಇ ಮೇಲ್ ಕಳಿಸಿದ್ದಾರೆ ಅದರ ವಿಚಾರಣೆ ಕೂಡಾ ನಡೆಯಬೇಕಿದೆ ಎಂದರು.












Click it and Unblock the Notifications