ರೆಡ್ಡಿಗಳನ್ನು ಹೊಗಳಿ ಅಟ್ಟಕ್ಕೇರಿಸಿದ ಸಿಎಂ
ಬೆಂಗಳೂರು,
ಸೆ. 23 : ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದುರುಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಅದರಲ್ಲಿ ಒಂದು ಹಕ್ಕಿಯನ್ನು(ಬಳ್ಳಾರಿ ರೆಡ್ಡಿಗಳು) ಹೊಗಳಿ ಅಟ್ಟಕ್ಕೇರಿಸಿದ ಪ್ರಸಂಗ ನಡೆಯಿತು. id="toptextpromo">ಶಾಂತಿನಗರದ
ಬಸ್ ನಿಲ್ದಾಣದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಲಾಗಿರುವ ಸಂಚಾರ ಮತ್ತು ಸಾಗಣೆ ನಿರ್ವಹಣೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ರೆಡ್ಡಿಗಳನ್ನು ಯದ್ವಾತದ್ವಾ ಹೊಗಳುವ ಮೂಲಕ ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸಾರಿದರು. ರೆಡ್ಡಿ ಸಹೋದರರ ಸಹಕಾರ ಇಲ್ಲದಿದ್ದರೆ ಸರಕಾರ ರಚನೆಯಾಗುತ್ತಿರಲಿಲ್ಲ. ಬುಧವಾರದ ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ರೆಡ್ಡಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ರೆಡ್ಡಿಗಳು
ಸಹಕಾರ ನೀಡದಿದ್ದರೆ ಸರಕಾರ ರಚನೆಯಾಗುತ್ತಿರಲಿಲ್ಲ. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಅನೇಕ ವರದಿಗಳು ಬಂದಿವೆ. ಮುಖ್ಯಮಂತ್ರಿಯ ಗೆಲುವು, ರೆಡ್ಡಿಗಳಿಗೆ ಹಿನ್ನೆಡೆ ಎಂದು ವ್ಯಾಖ್ಯಾನಿಸಲಾಗಿದೆ. ವಾಸ್ತವವಾಗಿ ಇದು ಜನತೆಯ ಗೆಲುವು. ನನ್ನ ಗೆಲುವಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.











Click it and Unblock the Notifications