ಬೆಂಗಳೂರಿಗೆ ಹೊರಟ್ಟಿದ್ದ ವಿಮಾನ ತುರ್ತು ಭೂಸ್ಪರ್ಶ
ನವದೆಹಲಿ,
ಸೆ.23:ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟ್ಟಿದ್ದ ಜೆಟ್ ಲೈಟ್ ವಿಮಾನ ತಾಂತ್ರಿಕ ತೊಂದರೆಯ ಕಾರಣದಿಂದ ಇಂದು ಬೆಳಗ್ಗೆ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ 109 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರು. id="toptextpromo">ಬೋಯಿಂಗ್
737-700 ಏರ್ ಕ್ರಾಫ್ಟ್ ನ ಇಂಜಿನ್ ನಲ್ಲಿ ದೋಷವಿರುವುದನ್ನು ಕಂಡಬಂದ ಕಾರಣ ಬೆಳಗ್ಗೆ 7.45ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಮುಖ್ಯ ಪೈಲಟ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಿಗದಿತ
ರನ್ ವೇ ನಿಂದ ಬೆಂಗಳೂರಿನ ಕಡೆಗೆ ಹಾರಿ ಸಾಗಿದ್ದ ವಿಮಾನವನ್ನು ನೂತನ ರನ್ ವೇ ಬಳಿ ಸುರಕ್ಷಿತವಾಗಿ ಇಳಿಸುವಲ್ಲಿ ಪೈಲಟ್ ಗಳು ಯಶಸ್ವಿಯಾಗಿದ್ದು, ಪ್ರಯಾಣಿಕರಿಗೆ ಹೋದ ಜೀವ ಬಂದಂತ್ತಾಗಿದೆ. ವಿಮಾನದ ತಾಂತ್ರಿಕ ದೋಷದ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ.











Click it and Unblock the Notifications