ಜೆಡಿಎಸ್ ಕಚೇರಿಯ ಗಾರ್ಡ್ ಕೊಲೆ
ಬೆಂಗಳೂರು,
ಸೆ.23: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯ ಕಾವಲುಗಾರ(ಸೆಕ್ಯುರಿಟಿ ಗಾರ್ಡ್) ಮುನಿಯಪ್ಪ ಎಂಬುವರ ಕೊಲೆ ನಡೆದಿದೆ. id="toptextpromo">ಇಂದು
ಬೆಳಗ್ಗೆ ಕಸ ಗುಡಿಸಲು ಕಚೇರಿ ಬಳಿ ಬಂದೆ. ಗಾರ್ಡ್ ಮುನಿಯಪ್ಪ ಕಾಣಸಲಿಲ್ಲ. ನಂತರ ಆತನ ಶವ ನೋಡಿದೆ. ತಕ್ಷಣ ಪೊಲೀಸರಿಗೆ ತಿಳಿಸಿದೆ ಎಂದು ಕೆಲಸದಾಳು ಪದ್ಮಾ ಎಂಬುವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣಾ ಪೊಲೀಸರು ಆಗಮಿಸಿದ್ದಾರೆ. ರಾತ್ರಿ ವೇಳೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠ ಗೋಪಾಲ್ ಹೊಸೂರ್ ಅವರು, ಕೊಲೆಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರೆದಿದೆ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ಥಳಕ್ಕೆ
ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಲೆಯ ಬಗ್ಗೆ ಇನ್ನೂ ಯಾವುದೇ ಜೆಡಿಎಸ್ ಮುಖಂಡರು ಪ್ರತಿಕ್ರಿಯೆ ನೀಡಿಲ್ಲ. ಕೊಲೆಯಾದ ವ್ಯಕ್ತಿ ಮುನಿಯಪ್ಪ ಶ್ರೀರಾಂಪುರದ ನಿವಾಸಿ ಎಂದು ತಿಳಿದುಬಂದಿದೆ.











Click it and Unblock the Notifications