ಬಾಬ್ರಿ ತೀರ್ಪು : ಶಾಂತಿ ಕಾಪಾಡಲು ಹೆಗ್ಗಡೆ ಮನವಿ
ಬೆಂಗಳೂರು,
ಸೆ. 23 : ಶ್ರೀರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಸೆ.24 ರಂದು ತೀರ್ಪು ಘೋಷಿಸುತ್ತಿದ್ದು, ಜನತೆ ವಾತಾವರಣ ಕದಡದಂತೆ ನೋಡಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಕೋರಿದ್ದಾರೆ. id="toptextpromo">ವಿಚಾರ
ಭೇದಗಳು, ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳು ಬಂದಾಗಲೆಲ್ಲ ಸಹಜವಾಗಿ ಉದ್ವಿಗ್ನ ವಾತಾವರಣ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಮೊರೆ ಹೊಕ್ಕು ನ್ಯಾಯ ಪಡೆಯುವ ದಾರಿ ಉತ್ತಮವಾದದ್ದು. ಇದೀಗ ನ್ಯಾಯಾಲಯದಿಂದ ಬರುವ ತೀರ್ಪು ಹೇಗಿರುತ್ತದೆ ಎಂಬುದು ತಿಳಿಯದಿದ್ದರೂ ಸಹಜವಾಗಿ ಸೋಲು-ಗೆಲುವುಗಳ ನಿರೀಕ್ಷೆಯಲ್ಲಿ ದೇಶದಲ್ಲಿ ಶಾಂತಿ ಕದಡಬಹುದೆಂಬ ನಿರೀಕ್ಷೆ ಇದೆ. id='are-slot-1' class='oiad oi-axt oiadv'> id='top-searched-articles'>ತೀರ್ಪು
ಬಂದ ನಂತರ ಸರಿಯಾಗಿ ವಿಚಾರ, ವಿಮರ್ಶೆ ಮಾಡಿ ರಾಷ್ಟ್ರ ನಾಯಕರು, ಧಾರ್ಮಿಕ ಮುಖಂಡರು ಸೂಕ್ತ ತೀರ್ಮಾನ ಕೈಗೊಳ್ಳುವವರೆಗೆ ಶಾಂತಿ ಕಾಪಾಡಬೇಕು ಎಂದು ಅವರು ಕೋರಿದ್ದಾರೆ.











Click it and Unblock the Notifications