ಬಾಬ್ರಿ ತೀರ್ಪು : ಶಾಂತಿ ಕಾಪಾಡಿ ಎಂದ ಪಿಎಫ್ಐ

ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡದೆ ಮತ್ತು ಪ್ರಚೋದನಕಾರಿ ಮಾತುಗಳಿಗೆ ಬಲಿಯಾಗದೆ ವಿವಾದವನ್ನು ನ್ಯಾಯಾಲಯದ ಮೂಲಕವೇ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಕೆಲ ಸಂಘಟನೆಗಳು ಕೋಮುಗಲಭೆ ನಡೆಸುವ ಹೊಂಚು ಹಾಕಿವೆ. ಈ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಪಿಎಫ್ಐ ಹೇಳಿದೆ.
ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ ಪೊಲೀಸರಿಗೆ ಸುದ್ದಿ ತಿಳಿಸುವುದು, ಆಯಾ ಪ್ರದೇಶದ ಜಮಾಅತ್ ಮೊಹಲ್ಲಾದ ನಾಯಕರು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಪೂರ್ಣ ವಿಶ್ವಾಸವಿರಿಸಿ ಸಂಯಮದಿಂದ ವರ್ತಿಸುವುದು ಸೇರಿದಂತೆ ಸಂಘಟನೆ ನಾಗರಿಕರಿಗೆ ಹಲವಾರು ಮನವಿಗಳನ್ನು ಮಾಡಿಕೊಂಡಿದೆ.
ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಂ ಮೂಲಭೂತ ಸಂಘಟನೆ ಎಂದು ಗುರುತಿಸಿಕೊಂಡಿದೆ. ಮೊಹ್ಮದ್ ಪೈಗಂಬರರಿಗೆ ಪ್ರಶ್ನೆ ಪತ್ರಿಕೆ ರೂಪಿಸುವಲ್ಲಿ ಅವಮಾನಿಸಿದ ಎಂಬ ಕಾರಣಕ್ಕಾಗಿ ಪಿಎಫ್ಐ ಸಂಘಟನೆ ಕಾರ್ಯಕರ್ತರು ಉಪನ್ಯಾಸಕ ಟಿ ಜೆ ಜೋಸೆಫ್ ಅವರ ಕೈಯನ್ನೆ ಕತ್ತರಿಸಿದ ಘಟನೆ ಕೇರಳದಲ್ಲಿ ನಡೆದಿತ್ತು. ಇದರಿಂದ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು.












Click it and Unblock the Notifications