ಮುಸ್ಲೀಮರಿಗೆ ಬಾಬರ್ ಆದರ್ಶ ವ್ಯಕ್ತಿಯಲ್ಲ

Zahir ud-din Muhammad Babur
ದೇಶದಲ್ಲಿ ಶಾಂತಿ ಕದಡಲು ದುಷ್ಕರ್ಮಿಗಳಿಗೆ ವಿದೇಶಗಳಿಂದ ಸಾಕಷ್ಟು ಹಣ ಸಿಗುತ್ತಿದ್ದು, ಭಾರತದ ಮೇಲೆ ದಾಳಿ ಮಾಡಿ, ಇಲ್ಲೇ ನೆಲೆಸಿದ ಅನೇಕಾನೇಕ ರಾಜರುಗಳಲ್ಲಿ ಬಾಬರ್ ಕೂಡಾ ಒಬ್ಬ. ಆತನನ್ನು ಭಾರತೀಯ ಮುಸ್ಲೀಮರು ಆದರ್ಶ ವ್ಯಕ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಮೊಘಲ್ ಸಾಮ್ರಜ್ಯ ಸ್ಥಾಪನೆಯಷ್ಟೇ ಬಾಬರ್ ಗೆ ಇದ್ದ ಉದ್ದೇಶ. ಧಾರ್ಮಿಕವಾಗಿ ಆತನ ಆದರ್ಶಗಳನ್ನು ಭಾರತೀಯ ಮುಸ್ಲೀಮರು ಅನುಸರಿಸುವ ಅವಶ್ಯಕತೆ ಇಲ್ಲ ಎಂದು ಹರ್ಜತ್ ಸೈಯದ್ ಮೊಹಮ್ಮಸ್ ಹಷ್ಮಿ ಮಿಯಾ ಹೇಳಿದ್ದಾರೆ.

ಸೌದಿ ಮೂಲದ ಗುಂಪು ಭಾರತೀಯ ಮುಸ್ಲೀಮರಲ್ಲಿ ನಿರಂತರವಾಗಿ ವಿಷಬೀಜ ಬಿತ್ತುತ್ತಿದೆ. ರಾಜಕೀಯ ಉದ್ದೇಶಗಳಿಂದ ಜಮಾತೆ ಉಲ್ ಉಲೇಮಾದಂತಹ ಸಂಘಟನೆಗಳು ತಲೆ ಎತ್ತಿವೆ. ಉಗ್ರತ್ವ ಪ್ರತಿಪಾದಿಸುವ ಮುಸ್ಲಿಂ ವಿದ್ಯಾರ್ಥಿಗಳು ಒಗ್ಗೂಡಿ ಸಿಮಿಯನ್ನು ರೂಪಿಸಿದರು.

ಬಾಬರ್ ಆದರ್ಶ ನಮಗೆ ಬೇಡ: ಜಹೀರ್ ಉದ್ ದಿನ್ ಬಾಬರ್ ನಮ್ಮ ಆದರ್ಶದ ಪ್ರತೀಕವಲ್ಲ ಖ್ವಾಜಾ ಘರೀಬ್ ನವಾಜ್ ಹಾಗೂ ಅವರ ಧಾರ್ಮಿಕ ಸಂದೇಶಗಳೇ ಭಾರತೀಯ ಮುಸ್ಲೀಮರ ಹೆಗ್ಗುರುತು ಎಂದು ಇಸ್ಲಾಮಿಕ್ ವಿದ್ವಾಂಸ ಖಾಜಿ ಇ ಮಿಲ್ಲತ್ ಹಜರತ್ ಸೈಯದ್ ಷಾ ಮೊಹಮ್ಮದ್ ಮಿಯಾ ಹೇಳಿದ್ದಾರೆ.

ಜಗತ್ತಿನಾದ್ಯಂತ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳು, ವಿಧ್ವಂಸಕ ಕೃತ್ಯಗಳ ಹಿಂದೆ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ನ ಕೈವಾಡವಿದೆ. ಸನಾತನ ಧರ್ಮವಾದ ಹಿಂದೂಗಳಾಗಲಿ, ಇಸ್ಲಾಂ ಧರ್ಮಿಯರಾಗಲಿ ಉಗ್ರಗಾಮಿಗಳಾಗಳು ಸಾಧ್ಯವಿಲ್ಲ. ಸೌದಿ ಹಾಗೂ ಇಸ್ರೇಲ್ ಗಳು ಭಯೋತ್ಪಾದನೆಯ ಬೀಜವನ್ನು ಎಲ್ಲೆಡೆ ಬಿತ್ತಿ, ಬೆಳೆಸುತ್ತಿದೆ.

ಉಗ್ರರ ವಿಷಬೀಜದ ಎಚ್ಚರಿಕೆ : ಸೌದಿ ಅರೇಬಿಯಾದಲ್ಲೇ 350 ಮಸೀದಿಗಳನ್ನು ನಾಶ ಮಾಡಲಾಗಿದೆ. ಪ್ರವಾದಿ ಮೊಹಮ್ಮದರ ಕುಟುಂಬಕ್ಕೆ ಸೇರಿದ ಎಲ್ಲಾ ಕುರುಹುಗಳನ್ನು ನಾಶಪಡಿಸುತ್ತಿದೆ. ಆದರೆ, ಈ ಬಗ್ಗೆ ಅಮೆರಿಕಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೂಲಭೂತವಾದಿಗಳಿಗೆ ರಾಜಕೀಯದ ಹುಚ್ಚು ಹತ್ತಿ ಅಧಿಕಾರ ಕೈಗೆ ಬಂದರೆ, ಅಮಾಯಕರಿಗೆ ದೇವರೇ ಗತಿ.

ಆದರೆ, ಸೌದಿಯ ಅಧಿಕಾರಿ ವರ್ಗ ಎಲ್ಲ ಮುಸ್ಲಿಂ ಪ್ರಜೆಗಳನ್ನು ದಿಕ್ಕುತಪ್ಪಿಸುತ್ತಿದೆ. ಇಂದು ನಾವು ಕಾಣುವ ಎಲ್ಲಾ ನಿಷೇಧಿತ ಉಗ್ರಗಾಮಿ ಸಂಘಟನೆಗಳ ಮೂಲ ಬೇರು ಸೌದಿ ಅರೇಬಿಯಾದಲ್ಲಿದೆ.

ಸೌದಿ ಅರೇಬಿಯಾವನ್ನು ಚೆನ್ನಾಗಿ ಬಳಸಿಕೊಂಡ ಅಮೆರಿಕಾ ಈಗ ಭಾರತದತ್ತ ಮುಖ ಮಾಡಿದೆ. ಆದರೆ ಭಾರತಕ್ಕೆ ಆಧ್ಯಾತ್ಮಿಕತೆ ರಕ್ಷಾ ಕವಚವಿದೆ ಎಂದು ಮೊಹಮ್ಮದ್ ಮಿಯಾನ್ ಹೇಳಿದ್ದಾರೆ.

ಹಿಂದೂ ಉಗ್ರಗಾಮಿಗಳು, ಮುಸ್ಲಿಂ ಉಗ್ರಗಾಮಿ ಎನ್ನುವುದು ತಪ್ಪು. ಭಯೋತ್ಪಾದಕರಿಗೆ ಯಾವುದೇ ಜಾತಿ ಧರ್ಮದ ಬಂಧವಿರುವುದಿಲ್ಲ. ಬಾಬ್ರಿ ಮಸೀದಿ ಹಾಗೂ ರಾಮಜನ್ಮಭೂಮಿ ವಿವಾದ ಕೇವಲ ರಾಜಕೀಯ ಪ್ರೇರಿತ. ಇಡೀ ವಿಶ್ವವೇ ಮಸೀದಿ ಎಂಬುದು ನಮ್ಮ ನಂಬಿಕೆಯಾಗಿರುವಾಗ, ಕೇವಲ ಒಂದು ಜಾಗಕ್ಕಾಗಿ ಹೋರಾಟ ಮಾಡುವುದು ಸರಿಯಲ್ಲ. ನಮಾಜ್ ಯಾವುದೇ ಸ್ಥಳದಲ್ಲಾದರೂ ಮಾಡಬಹುದಾಗಿದೆ. ಆದರೆ ನಮಾಜು ಮಾಡಿ ಸ್ಥಳವನ್ನೆಲ್ಲಾ ಮಸೀದಿ ಎನ್ನಲಾಗದು. ಪ್ರಜ್ಞಾವಂತ ನಾಗರಿಕರು, ಮುಗ್ಧ ಜನರಿಗೆ ತಿಳಿ ಹೇಳಬೇಕು. ದುಷ್ಕರ್ಮಿಗಳ ಕೈಲಿ ಮುಂದಿನ ಪೀಳಿಗೆಯ ಭವಿಷ್ಯ ಬರೆಯಲು ಬಿಡಬಾರದು ಎಂದು ಮೊಹಮ್ಮದ್ ಮಿಯಾ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+