ಕೆಂಡಕಾರಿದ್ದ ಸಂಜಯ್ ದತ್ ಗೆ ಸಮನ್ಸ್
ಮಾವು
(ಉ.ಪ್ರ.) ಸೆ. 21 : ಕಳೆದ ವರ್ಷ ಇಲ್ಲಿ ನಡೆದ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ. ಈ ಕುರಿತು ಡಿಸೆಂಬರ್ 10ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. id="toptextpromo">ಕಳೆದ
ವರ್ಷದ ಲೋಕಸಭಾ ಚುನಾವಣೆಯ ವೇಳೆ ಸ್ಥಳೀಯ ಎಸ್‌ಪಿ ಅಭ್ಯರ್ಥಿ ಅರ್ಷದ್ ಜಮಾಲಾ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ದತ್ ಉದ್ರೇಕಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯವೊಂದರ ನ್ಯಾಯಾಧೀಶ ಕೃಷ್ಣ ಕುಮಾರ್ 51ರ ಹರೆಯದ ಚಿತ್ರ ನಟ ಸಂಜಯ್ ದತ್ ಮತ್ತು ಎಸ್‌ಪಿ ನಾಯಕ ಅರ್ಷದ್ ಜಮಾಲ್‌ಗೆ ಸಮನ್ಸ್ ಜಾರಿಗೊಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಳೆದ
ವರ್ಷದ ಲೋಕಸಭಾ ಚುನಾವಣೆಯ ಸಂದರ್ಭ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜಯ್ ದತ್, ಚುನಾವಣಾ ಪ್ರಚಾರದಲ್ಲಿ ಈ ರೀತಿ ಮಾತನಾಡಿದ್ದುದು ವಿವಾದಕ್ಕೆ ಕಾರಣವಾಗಿತ್ತು.











Click it and Unblock the Notifications