ಅಕ್ರಮ ಸಂಬಂಧಕ್ಕೆ ಪ್ರಾಣತೆತ್ತ ಯುವಕ

Crimebeat
ನವದೆಹಲಿ, ಸೆ. 20 : ಮಗಳ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆಗೈದ ವ್ಯಕ್ತಿಯನ್ನು ಹಾಗೂ ಆತನ ಮಗನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

23 ರ ಹರೆಯದ ಮಹೇಂದರ್ ಸಿಂಗ್‌ನನ್ನು ಹತ್ಯೆಗೈದ ಆರೋಪಿ ಆಜಾದ್ (40) ಹಾಗೂ ಮೋನು (19)ರನ್ನು ಭಾನುವಾರ ಬಂಧಿಸಲಾಗಿದೆ. ಹೈದರ್ ಪುರದಲ್ಲಿರುವ ತ್ಯಾಜ್ಯನೀರು ನಿರ್ವಹಣಾ ಘಟಕದ ಚರಂಡಿಯೊಂದರಲ್ಲಿ ಮಹೇಂದರ್ ಸಿಂಗ್‌ನ ಶವವನ್ನು ಪೊಲೀಸರು ಪತ್ತೆಹಚ್ಚಿದ್ದರು. ಮೃತದೇಹವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸುತ್ತಿ ಚರಂಡಿಗೆ ಎಸೆಯಲಾಗಿತ್ತು.

ಮಹೇಂದರ್ ಗೆ ಆಜಾದ್‌ನ ಮಗಳ ಜೊತೆಗೆ ಅಕ್ರಮ ಸಂಬಂಧವಿತ್ತು. ಅದನ್ನು ಆಜಾದ್ ಮತ್ತವನ ಮಗ ಮೋನು ವಿರೋಧಿಸುತ್ತಿದ್ದರೆಂಬ ಮಾಹಿತಿ ಪೊಲೀಸರಿಗೆ ದೊರೆಕಿದೆ. ಇಬ್ಬರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ಸಂಗತಿ ಹೊರಬಿದ್ದಿದೆ.

ರಾತ್ರಿ ಆಜಾದ್‌ ಮಗಳ ಮನೆಯಲ್ಲಿ ಕೊಠಡಿಯಲ್ಲಿ ಮಹೇಂದರ್ ನನ್ನು ತಂದೆ, ಮಗ ಹಿಡಿದು ಹಿಗ್ಗಾಮಗ್ಗಾ ಥಳಿಸಿದ್ದರು. ಕೊನೆಗೆ ಆತನ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದದಿದ್ದರಿಂದ ಮಹೇಂದರ್ ಪ್ರಜ್ಞಾಹೀನ ಸ್ಥಿಗೆ ತಲುಪಿದ್ದಾನೆ. ಮಹೇಂದರ್ ಸತ್ತಿರುವುದನ್ನು ಖಚಿತಪಡಿಸಿ ಕೊಳ್ಳಲು, ಇಬ್ಬರೂ ಆತನ ಕುತ್ತಿಗೆಯನ್ನು ಹಿಸುಕಿದ್ದಾರೆ. ಆತನ ಶವವನ್ನು ಬೈಸಿಕಲ್‌ನಲ್ಲಿ ಕೊಂಡೊಯ್ದ ಆರೋಪಿಗಳು, ಅದನ್ನು ಕಾಲುವೆಯೊಂದರಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+