ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದ ಮೇರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್

By Mahesh
|
Google Oneindia Kannada News

Mary Kom
ಬ್ರಿಜ್‌ಟೌನ್, ಸೆ.19: ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಫೈನಲ್ ನಲ್ಲಿ ರೋಮಾನಿಯಾದ ಸ್ಪರ್ಧಿಯನ್ನು ಕೆಳಗುರುಳಿಸಿದ ಭಾರತದ ಹೆಮ್ಮೆಯ ಪುತ್ರಿ ಮೇರಿ ಕೋಮ್ ಸತತ ಐದನೇ ಬಾರಿಗೆ ಚಿನ್ನದ ಬೇಟೆಯಾಡಿದ ಐತಿಹಾಸಿಕ ದಾಖಲೆ ಮೆರೆದಿದ್ದಾರೆ.

48 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ತಮ್ಮ ಫಿಲಿಪೈನ್ಸ್ ಎದುರಾಳಿ ಅಲೈಸ್ ಕಾಟೆರನ್ನು 8-1 ಅಂಕಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.ಫೈನಲ್‌ನಲ್ಲಿ ರೋಮಾನಿಯಾದ ಸ್ಟೆಲುಟಾ ಡುಟಾರನ್ನು 16-6 ಅಂಕಗಳಿಂದ ಸೋಲಿಸಿ ಜಯಭೇರಿ ಬಾರಿಸಿದರು.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ಖೇಲ್ ರತ್ನ ಪುರಸ್ಕೃತೆ ಕೋಮ್, ಇದೇ ವೇಳೆ ಮತ್ತೋರ್ವ ಭಾರತೀಯ ಬಾಕ್ಸರ್ ಕವಿತಾ (+81ಕೆಜಿ)ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ, ಉಕ್ರೇನ್‌ನ ಎದುರಾಳಿ ಕಟೆರಿನಾ ಕುಝೆಲ್ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಣಿಪುರದ ಮೇರಿ ಕೊಮ್ ಎರಡು ಮಕ್ಕಳ ತಾಯಿಯಾಗಿದ್ದು, ಸತತವಾಗಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮೆರೆಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X