ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಮುಂದಾಗಲಿ
ನವದೆಹಲಿ,
ಸೆ 16 : ಮುಸಲ್ಮಾನ ಬಾಂಧವರು ಕೂಡಾ ನಮ್ಮವರು, ಪರಕೀಯರಲ್ಲ. ದೇಶದ ಬಗ್ಗೆ ಅವರಿಗೂ ಅಭಿಮಾನವಿದೆ, ಅವರನ್ನು ಯಾರೊಬ್ಬರೂ ಅಪನಂಬಿಕೆಯಿಂದ ನೋಡಬೇಕಾಗಿಲ್ಲ. ದೇಶದಲ್ಲಿ ಗೌರವಯುತವಾಗಿ ಬದುಕುತ್ತಿರುವ ಎಲ್ಲಾ ಮುಸ್ಲಿಮರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಕರಿಸುವ ಮೂಲಕ ನಾವೂ ಭಾರತೀಯರೆಂದು ನಿರೂಪಿಸಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ. id="toptextpromo">ರಾಮಮಂದಿರ
ನಿರ್ಮಾಣಕ್ಕೆ ಸಹಕರಿಸುವ ಮೂಲಕ ಮುಸ್ಲಿಮರು ದೇಶಪ್ರೇಮ ಮೆರೆಯಲಿ. ಅಪನಂಬಿಕೆಯನ್ನು ದೂರ ಮಾಡಿಕೊಳ್ಳಲಿ.ದೇವಾಲಯ ನಿರ್ಮಾಣಕ್ಕೆ ಸಹಕರಿಸುವ ಮೂಲಕ ಇಡೀ ಜಗತ್ತಿಗೆ ಸ್ಪಷ್ಟವಾದ ಸಂದೇಶ ನೀಡುವ ಅವಕಾಶ ಮುಸ್ಲಿಂ ಸಮುದಾಯಕ್ಕಿದೆ ಎಂದು ಭಾಗವತ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಮಮಂದಿರ
ವಿವಾದಕ್ಕೆ ಸಂಬಂಧಿಸಿದಂತೆ ಸೆ.24ರಂದು ಅಂತಿಮ ತೀರ್ಪು ಹೊರಬೀಳಲಿದೆ. ಅಲಹಾಬಾದ್ ಹೈ ಕೋರ್ಟ್ ನ ತೀರ್ಪು ಐತಿಹಾಸಿಕವಾಗಿದ್ದು ಸಂವಿಧಾನದ ಚೌಕಟ್ಟಿನಲ್ಲಿ ಇರುತ್ತದೆ ಎನ್ನುವ ವಿಶ್ವಾಸವನ್ನು ಭಾಗವತ್ ವ್ಯಕ್ತ ಪಡಿಸಿದ್ದಾರೆ.











Click it and Unblock the Notifications