ಶಾಂತಿನಿಕೇತನದಲ್ಲಿ ರಾಹುಲ್ ಶಾಂತಿ ಮಂತ್ರ

ರವೀಂದ್ರನಾಥ ಠಾಗೂರ್ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿ ಪ್ರಧಾನಿಯಾಗಿ ವಿವಿಯ ಕುಲಾಧಿಪತಿಗಳಾಗುತ್ತೀರಾ?ಎಂಬ ಪ್ರಶ್ನೆಯೊಂದಕ್ಕೆ ರಾಹುಲ್ ಮೇಲಿನಂತೆ ಉತ್ತರಿಸಿದರು.
ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ರಾಹುಲ್ ತಮ್ಮ ಮೊದಲ ದಿನದ ಪ್ರವಾಸದಲ್ಲಿ ವಿವಿಗೆ ಭೇಟಿ ನೀಡಿ ಒಂದೂವರೆ ಗಂಟೆ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಲಲಿತ ಕಲೆಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಲಲಿತ ಕಲೆಗಳನ್ನು ಮತ್ತಷ್ಟು ಶಕ್ತಗೊಳಿಸಲು ನೀವು ನನಗೆ ಅಥವಾ ಪ್ರಧಾನಿ ಕಾರ್ಯಾಲಯಕ್ಕೆ ಪತ್ರದ ಮೂಲಕ ಸಲಹೆ ನೀಡಬಹುದು ಎಂದರು. ನೀವು ಅಪೇಕ್ಷಿಸಿದರೆ ನಿಮಗೆ ನಾನು ಸಾಕಷ್ಟು ಕೆಲಸಗಳನ್ನು ವಹಿಸುತ್ತೇನೆ. ನಿಮಗೆ ಕೆಲಸ ಮಾಡುವ ಇಚ್ಛೆ ಇದ್ದಲ್ಲಿ ಅದನ್ನು ಯಾವಾಗ ಮತ್ತು ಹೇಗೆ ಮಾಡಬೇಕೆಂದು ಹೇಳುತ್ತೇನೆ. ಆದರೆ, ಜನನಾಯಕರಿಗೆ ಪತ್ರಗಳನ್ನು ಬರೆಯುವುದೊಂದೇ ಕೆಲಸವಾಗಬಾರದು ಎಂದು ರಾಹುಲ್ ಗಾಂಧಿ ವಿದ್ಯಾರ್ಥಿಗಳಿಗೆ ಹೇಳಿದರು.












Click it and Unblock the Notifications