ರಾಚಂಗೌಡ ರಾಜೀನಾಮೆಗೆ ಈಶ್ವರಪ್ಪ ಸ್ವಾಗತ

ಹರಕೆಯ ಕುರಿ ಎಂದಿದ್ದ ರಾಚಂಗೌಡ: ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ್ ನಡೆದಿಲ್ಲ ಎಂದು ರಾಜ್ಯ ಹೈಕೋರ್ಟ್ ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಆದರೆ ಆಸ್ಪತ್ರೆಗಳ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಸಚಿವ ರಾಚಂಗೌಡ ಅವರ ಅಫಿಡವಿಟ್ ಅನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಇದಕ್ಕೆ ಪೂರಕವಾಗಿ ಸಿಬ್ಬಂದಿ ನೇಮಕಾತಿಗಳನ್ನು ಸಿಎಂ ಯಡಿಯೂರಪ್ಪ ಅವರು ರದ್ದುಗೊಳಿಸಿ ಚೀನಾ ಪ್ರವಾಸಕ್ಕೆ ಹೊರಟುಬಿಟ್ಟರು. ಹೊರಡುವ ಮುನ್ನ ರಾಚಂಗೌಡರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಚೀನಾಕ್ಕೆ ಐದು ದಿನಗಳ ವಾಣಿಜ್ಯ ಪ್ರವಾಸಕ್ಕೆ ಹೋಗಿರುವ ಸಿಎಂ ಹಿಂತಿರುಗಿ ಬರುವವರೆಗೂ ಕಾಯುವ ಗೋಜಿಗೆ ಹೋಗದೆ, ಪಕ್ಷದ ಹಿತದೃಷ್ಟಿಯಿಂದ ಹಿರಿಯ ನಾಯಕರ ಆದೇಶ ಪಾಲನೆಯ ಸಲುವಾಗಿ ರಾಜೀನಾಮೆ ನೀಡಿದ್ದೇನೆ ಎಂದು ರಾಮಚಂದ್ರಗೌಡ ಹೇಳಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ಭ್ರಷ್ಟಾಚಾರ, ಅವ್ಯವಹಾರಗಳಿಗೆ ಸಿಎಂ ಯಡಿಯೂರಪ್ಪ.ಅವರೇ ಕ್ಯಾಪ್ಟನ್. ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ರಾಚಂಗೌಡರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಪ್ರತಿಪಕ್ಷದ ನಾಯಕ ವಿಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.












Click it and Unblock the Notifications