ಮಂಗಳೂರು ದುರಂತ : ನಿದ್ದೆ ಮಾಡುತ್ತಿದ್ದ ಪೈಲೆಟ್
ನವದೆಹಲಿ,
ಸೆ.9 : ಕಳೆದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತ ಪೈಲಟ್ ನಿದ್ದೆ ಮಾಡುತ್ತಿದ್ದರಿಂದ ವಿಮಾನ ಅಪಘಾತ ಸಂಭವಿಸಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗು ಬೋಯಿಂಗ್ ವಿಮಾನ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ದುರಂತದ ತನಿಖೆ ನಡೆಸುತ್ತಿರುವ ಆಯೋಗಕ್ಕೆ ಬುಧವಾರ ವರದಿ ಸಲ್ಲಿಸಿದ್ದಾರೆ. id="toptextpromo">ವಿಮಾನವನ್ನು
ಕೆಳಗಿಳಿಸುವಾಗ ಪೈಲಟ್, ಸಹ ಪೈಲಟ್‌ನ ಮಾತು ನಿರ್ಲಕ್ಷಿಸಿ, ವಿಮಾನದ ಕಂಪ್ಯೂಟರ್ ನೀಡಿದ ಮುನ್ನಚ್ಚೆರಿಕೆಯನ್ನು ಗಮನಿಸದೇ ಇದ್ದುದು ಕಾಕ್‌ಪಿಟ್ ವಾಯ್ಸೆ ರೆಕಾರ್ಡರ್ ನಲ್ಲಿ ಸಿಕ್ಕಿದ ಮಾಹಿತಿಯಿಂದ ಪತ್ತೆಯಾಗಿದೆ. ವಿಮಾನವನ್ನು ಮತ್ತೊಂದು ಸುತ್ತು ಹಾರಾಟ ನಡೆಸುವಂತೆ ಸಹ ಪೈಲಟ್ ಹೇಳಿದ್ದಕ್ಕೂ ಪೈಲಟ್ ಕಿವಿಗೊಡಲಿಲ್ಲ ಎಂಬುದು ಕಡೆಯ 2.05 ನಿಮಿಷಗಳಲ್ಲಿ ಸಿವಿಆರ್ ನಲ್ಲಿ ದಾಖಲೆಯಾಗಿದೆ ಎಂದು ವರದಿ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಕೊನೆಯ
ಕೆಲವೇ ಕ್ಷಣಗಳಲ್ಲಿ ಸಿವಿಆರ್‌ನಲ್ಲಿ ''ನಮಗೆ ರನ್‌ವೇ ಮುಗಿದಿದೆ"" ಎಂಬ ಧ್ವನಿಯ ನಂತರ ವಿಮಾನ ಸ್ಫೋಟಿಸಿದ ಶಬ್ದ ದಾಖಲಾಗಿದೆ ಯೆಂದು ತನಿಖೆಗೆ ನೇಮಕಗೊಂಡ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನ ದುರಂತದಲ್ಲಿ 158 ಮಂದಿ ಬಲಿಯಾಗಿದ್ದರು. ದುರಂತ ವಿಮಾನದಲ್ಲಿ ಸರ್ಬಿಯಾದ ಕ್ಯಾಪ್ಟನ್ ಜಟ್ಕೋ ಗ್ಲೂಸಿಕ್ ಮುಖ್ಯ ಪೈಲೆಟ್ ಆಗಿದ್ದರೆ, ಎಚ್ ಎಸ್ ಅಹ್ಲುವಾಲಿಯಾ ಸಹ ಪೈಲೆಟ್ ಆಗಿದ್ದರು. ಸಿವಿಆರ್ ಮತ್ತು ಡಿಎಫ್ ಡಿಆರ್ ಉಪಕರಣಗಳನ್ನು ನಿರ್ದೇಶನಾಲಯವು ವಿಶ್ಲೇಷಣೆಗಾಗಿ ಅಮೆರಿಕಾಕ್ಕೆ ಕಳುಹಿಸಿತ್ತು.











Click it and Unblock the Notifications