ಪತ್ರಕರ್ತೆಗೌರಿ ಲಂಕೇಶ್ ವಿರುದ್ಧ ಪ್ರತಿಭಟನೆ
ಬೆಂಗಳೂರು,
ಸೆ.8: ಪತ್ರಕರ್ತೆ ಗೌರಿ ಲಂಕೇಶ್ ನಡೆಸುತ್ತಿರುವ ಸಾಂಸ್ಕೃತಿಕ ಭಯೋತ್ಪಾದನೆ, ಕಾನೂನು ಉಲ್ಲಂಘನೆ, ಅಭಿವ್ಯಕ್ತಿ ಸ್ವಾತಂತ್ತ್ರ್ಯ ಹರಣ ಖಂಡಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಜಾಗೃತಿ ಸಮಿತಿ ಇಂದು ಎಂಜಿ ರಸ್ತೆ ಮಹಾತ್ಮಗಾಂಧಿ ರಸ್ತೆ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು. id="toptextpromo">ಕರವೇ
ಹೊರತ್ತಿರುವ ಕರವೇ ನಲ್ನುಡಿ ಪತ್ರಿಕೆ ವಿರುದ್ಧ ಗೌರಿ ಸಂಪಾದಕತ್ವದಲಂಕೇಶ್ ಪತ್ರಿಕೆಯಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿತ್ತು. ಈ ಸಂಬಂಧ ಗೌರಿ ಲಂಕೇಶ್ ಹಾಗೂ ಪಾರ್ವತೀಶ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕರವೇ ವಿರುದ್ಧ ಲೇಖನ ಪ್ರಕಟಿಸಬಾರದು ಎಂದು ಹಣದ ಆಮೀಷ ನೀಡಲಾಗಿತ್ತು ಎಂದು ಆರೋಪಿಗಳು ಹೇಳಿಕೆ ನೀಡಿದ್ದರು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ನ್ಯಾಯಾಲಯ
ಲೇಖನ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದ್ದರೂ ನ್ಯಾಯಾಲಯ ನಿಂದನೆ ಮಾಡಿ ಲೇಖನ ಪ್ರಕಟಿಸಿದ್ದಾರೆ ಎಂದು ಸಮಿತಿ ಕಾರ್ಯಕರ್ತ ಶಿವಕುಮಾರ್ ಆರೋಪಿಸಿದ್ದಾರೆ. ಇಂತಹ ಸಾಂಸ್ಕೃತಿಕ ಭಯೋತ್ಪಾದನೆ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.











Click it and Unblock the Notifications