ಐಯಾಮ್ ಓಕೆ ನೋ ಪ್ರಾಬ್ಲಂ: ಬಂಗಾರಪ್ಪ
ಕಲ್ಬುರ್ಗಿ,
ಸೆ.8: ಐಯಾಮ್ ಓಕೆ ನೋ ಪ್ರಾಬ್ಲಂ ಎಂದು ತಮ್ಮ ಅಭಿಮಾನಗಳತ್ತ ಕೈ ಬೀಸಿ ನಡೆದ ಬಂಗಾರಪ್ಪ ಅವರು ಅಷ್ಟಕ್ಕೂ ಕುಸಿದು ಬಿದ್ದಿದ್ದು ಯಾಕೆ?ಅನಾರೋಗ್ಯ, ಉಪವಾಸ ಕಾರಣ ಎನ್ನುತ್ತಿದ್ದಾರೆ ಹಿಂಬಾಲಕರು. id="toptextpromo">ಗುಲ್ಬರ್ಗಾ
ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಭಾಷಣ ಮಾಡುವ ವೇಳೆಯಲ್ಲಿ ದಿಢೀರ್ ಎಂದು ಕುಸಿದು ಬಿದ್ದಾಗ ಅಲ್ಲಿದ್ದವರೆಲ್ಲಾ ದಿಗ್ಭ್ರಮೆಗೊಂಡರು. ಕೆಲ ಕಾಲ ಅಲ್ಲೇ ಕುರ್ಚಿಯಲ್ಲಿ ಕೂಡಿಸಿ ಗಾಳಿ ಬೀಸಿ ಸುಧಾರಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಮಧುಮೇಹ
ಹಾಗೂ ಕಿಡ್ನಿ ತೊಂದರೆಯ ಜೊತೆಗೆ ವಯೋ ಸಹಜ ನಿಶ್ಯಕ್ತಿ ಬಂಗಾರಪ್ಪ ಅವರನ್ನು ಆವರಿಸಿದೆ. ಆಲ್ಲದೆ ಬೆಳಗ್ಗಿನಿಂದ ಉಪಹಾರ ಸೇವಿಸಿರಲಿಲ್ಲ ಎಂದು ತಿಳಿದುಬಂದಿದೆ. ಬಂಗಾರಪ್ಪ ಅವರು ಕುಸಿದು ಬಿದ್ದಾಗ ವೇದಿಕೆಯಲ್ಲಿ ಕೂತಿದ್ದ ಕಾಂಗ್ರೆಸ್ ಮುಖಂಡರಾದ ಉಮಾಶ್ರೀ, ಶಾಸಕ ಮಾಲೀಕಯ್ಯ ಗುತ್ತೇದಾರ್ ಹಾಗೂ ಧರಂ ಸಿಂಗ್ ಉಪಸ್ಥಿತರಿದ್ದರು.











Click it and Unblock the Notifications