ಯಡಿಯೂರಪ್ಪ ಅವರಿಗೆ ಬೆದರಿಕೆ ಇಮೇಲ್!
ಬೆಂಗಳೂರು,
ಸೆ. 7 : ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಸಹದ್ಯೋಗಿಗಳನ್ನು ಕೊಲ್ಲುವುದಾಗಿ ಜಿಹಾದ್ ಪಾಕಿಸ್ತಾನ ಎಂಬ ಹೆಸರಿನಲ್ಲಿ ಬೆದರಿಕೆಯ ಇ ಮೇಲ್ ಬಂದಿರುವ ಅಂಶವೊಂದು ಐದು ದಿನಗಳ ನಂತರ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ವಿಧಾನಸೌಧ ಪೊಲೀಸರ ತಂಡ ತನಿಖೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. id="toptextpromo">ಈ
ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸೌಧ ಪೊಲೀಸರು, ಮುಖ್ಯಮಂತ್ರಿಗಳಿಗೆ ಬೆದರಿಕೆ ಪತ್ರ ಬಂದ ನಂತರ ತನಿಖೆ ಚುರುಕುಗೊಳಿಸಲಾಗಿದೆ. ಇಮೇಲ್ ಬಂದಿರುವ ಮೂಲವನ್ನು ಪತ್ತೆ ಹಚ್ಚಲು ಯತ್ನ ನಡೆದಿದೆ, ಆ.29ರಂದು ಸಂಜೆ 4.32ಕ್ಕೆ ಮಲ್ಲೇಶ್ವರಂ ಕೆಫೆಯೊಂದರಿಂದ ಬೆದರಿಕೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜಿಹಾದ್ ಪಾಕಿಸ್ತಾನ ಹೆಸರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಇಮೇಲ್ ಬಂದಿದೆ ಎಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಸಲ್ಲಿಸಿರುವ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಬೆದರಿಕೆಗೆ
ಹೆದರಲ್ಲ : ಬೆದರಿಕೆ ಇಮೇಲ್ ಗೆ ಜಗ್ಗಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅನ್ಯಾಯ, ಅಕ್ರಮಗಳ ವಿರುದ್ಧ ನಾನು ಸಮರ ಮುಂದುವರಿಸುತ್ತೇನೆ. ನಾನು ನನ್ನ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.











Click it and Unblock the Notifications