ಅಕ್ರಮ ಗಣಿಯಲ್ಲಿ ಗೌಡರ ಪಾಲೂ ಇದೆ : ಸಿಎಂ

ಚುನಾವಣಾ ಪ್ರಚಾರದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈವರೆಗೆ ಕಾಂಗ್ರೆಸ್ ವಿರುದ್ಧವೇ ಅಕ್ರಮ ಗಣಿ ಕುರಿತು ಗರ್ಜಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ದೇವೇಗೌಡರ ಕುಟುಂಬದ ವಿರುದ್ಧವೂ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡರಂತೆ ದೇದೇಗೌಡರ ಕುಟಂಬವೂ ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು. ಚಿಕ್ಕನಾಯಕನಹಳ್ಳಿಯಲ್ಲಿರುವ ಮಾತಾ ಮೈನ್ಸ್, ಶಾಕಂಬರಿ ಕಂಪನಿ, ಬನಶಂಕರಿ, ಸ್ಟಾರ್ ಎಕ್ಸ್‌ಪೋರ್ಟ್ ಎಂಬಿತ್ಯಾದಿ ಕಂಪನಿಗಳು ಯಾರ ಹೆಸರಿನಲ್ಲಿವೆ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ಮೊದಲು ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆಯನ್ನು ನೆನೆಪಿಸಿಕೊಳ್ಳಲಿ. ಮುಂದೆ ತಾನು ಯಾವುದೇ ರೀತಿಯಿಂದಲೂ ಸುಮ್ಮನಿರುವುದಿಲ್ಲ. ಅವರ ವಿರುದ್ಧ ಬಹಿರಂಗವಾಗಿ ಹೋರಾಟ ನಡೆಸುತ್ತೇನೆ ಎಂದು ಯಡಿಯೂರಪ್ಪ ಗುಡುಗಿದರು.












Click it and Unblock the Notifications