ಅಕ್ಷರಧಾಮ ದಾಳಿಕೋರರ ಶಿಕ್ಷೆಗೆ ಸುಪ್ರಿಂ ತಡೆ
ನವದೆಹಲಿ,
ಸೆ. 7 : ಗುಜರಾತಿನ ಅಕ್ಷರಧಾಮ ದೇವಾಲಯಕ್ಕೆ 2002ರಲ್ಲಿ ದಾಳಿ ನಡೆಸಿ 37 ಮಂದಿಯನ್ನು ಹತ್ಯೆ ಮಾಡಿದ್ದ ಆದಂಭಾಯಿ ಸುಲೇಮಾನ್ ಹಾಗೂ ಅಬ್ದುಲ್ ಖಯ್ಯಾಮ್ ಮುಫ್ತಿ ಎಂಬ ಉಗ್ರರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. id="toptextpromo">ಶಿಕ್ಷೆಗೆ
ಜಾರಿಗೆ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿ ಬಿ ಸುದರ್ಶನ ರೆಡ್ಡಿ ನೇತೃತ್ವದ ಪೀಠ, ಪ್ರಕರಣದಲ್ಲಿ ತಮಗೆ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಸಿಬಿಐ ಹಾಗೂ ಗುಜರಾತ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಅಕ್ಷರಧಾಮ
ದೇವಾಲಯದಲ್ಲಿ ನಡೆಸಿದ್ದ ಬರ್ಬರ ದಾಳಿಯ ಆರೋಪಿಗಳಾದ ಸುಲೇಮಾನ್ ಹಾಗೂ ಮುಫ್ತಿಗೆ ವಿಶೇಷ ಪೋಟಾ ನ್ಯಾಯಾಲಯವೊಂದು 2006ರ ಜುಲೈಯಲ್ಲಿ ಮರಣದಂಡನೆ ವಿಧಿಸಿತ್ತು. ಅದನ್ನು ಈ ವರ್ಷ ಜೂನ್ ನಲ್ಲಿ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ನಿಷೇಧಿತ ಲಷ್ಕರ್-ತೊಯ್ಯಬಾಕ್ಕೆ ಸೇರಿದವರೆನ್ನಲಾದ ಭಯೋತ್ಪಾದಕರ ಗುಂಪೊಂದು 2002ರ ಸೆ.24ರಂದು ಅಹ್ಮದಾಬಾದ್‌ನ ಅಕ್ಷರಧಾಮ ದೇವಾಲಯಕ್ಕೆ ದಾಳಿ ನಡೆಸಿ 37 ಮಂದಿಯನ್ನು ಹತ್ಯೆಗೈಯಲಾಗಿತ್ತು.











Click it and Unblock the Notifications