ಕೇರಳ : ಕೆಲಸ ಕಳೆದುಕೊಂಡ ಕಾಲೇಜು ಉಪನ್ಯಾಸಕ
ಕೊಚ್ಚಿ,
ಸೆ. 5 : ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮೊಹ್ಮದ್ ಅವರನ್ನು ಅವಮಾನಗೊಳಿಸಿದ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರಿಂದ ಕೈಕತ್ತರಿಸಿಕೊಂಡಿದ್ದ ಉಪನ್ಯಾಸಕನ ಕೆಲಸವನ್ನು ಕಾಲೇಜಿನ ಆಡಳಿತ ಮಂಡಳಿ ಕಿತ್ತುಕೊಂಡಿದೆ. ಆಡಳಿತ ಮಂಡಳಿಯ ಈ ಕ್ರಮ ಪ್ರಶ್ನಿಸಿ ಉಪನ್ಯಾಸಕ ಟಿ ಜೆ ಜೋಸೆಫ್ ಕೋರ್ಟ್ ಮೆಟ್ಟಿಲೇರಿದ್ದಾರೆ. id="toptextpromo">ಕೇರಳದ
ಇದುಕ್ಕಿ ಜಿಲ್ಲೆಯಲ್ಲಿರುವ ನ್ಯೂಮ್ಯಾನ್ ಕಾಲೇಜು ಆಡಳಿತ ಮಂಡಳಿ ಘಟನೆಗೆ ಸಂಬಂಧಿಸಿದ ಸಮಿತಿ ನೀಡಿರುವ ವರದಿ ಆಧರಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಇದೊಂದು ಅಚ್ಚರಿಯ ಸಂಗತಿಯಾಗಿದೆ. ಉಪನ್ಯಾಸಕನನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕುವುದು ಸರಿಯಲ್ಲ ಎಂದು ಕೇರಳ ಉನ್ನತ ಶಿಕ್ಷಣ ಸಚಿವ ಎಂ ಎ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಕೈಕತ್ತರಿಸಿಕೊಂಡು
ಕಂಗಾಲಾಗಿರುವ ಉಪನ್ಯಾಸಕ ಜೋಸೆಫ್ ಇದೀಗ ಕಾಲೇಜು ಆಡಳಿತ ಮಂಡಳಿ ತೆಗೆದುಕೊಂಡಿರುವ ನಿಲುವಿನಿಂದ ಮುಂದೇನು ಎಂಬ ಯೋಚನೆ ಶುರುವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.ನ್ಯಾಯಾಲಯದ
ಮೊರೆ
:
ಉಪನ್ಯಾಸಕ
ಅವರನ್ನು
ಕೆಲಸದಿಂದ
ಕಿತ್ತು
ಹಾಕಿರುವ
ಘಟನೆಯನ್ನು
ಖಂಡಿಸಿರುವ
ಕಾಲೇಜು
ಉಪನ್ಯಾಸಕರ
ಸಂಘ,
ಅವರ
ಬೆಂಬಲಕ್ಕೆ
ನಿಂತಿದೆ.
ಭಾನುವಾರ
ಜೋಸೆಫ್
ಅವರ
ಎರ್ನಾಕುಲಂನಲ್ಲಿರುವ
ನಿವಾಸಕ್ಕೆ
ಭೇಟಿ
ನೀಡಿ
ಮಾತುಕತೆ
ನಡೆಸಿದೆ.
ಜೋಸೆಫ್
ರನ್ನು
ಕೆಲಸದಿಂದ
ವಜಾಗೊಳಿಸುವುದು
ಅವರ
ಇನ್ನೊಂದು
ಕೈ
ಕತ್ತರಿಸಿದಂತೆ
ಎಂದು
ಉಪನ್ಯಾಸಕರ
ಸಂಘ
ಹೇಳಿದೆ.
ಕಾಲೇಜಿನ
ಆಡಳಿತ
ಮಂಡಳಿ
ಕ್ರಮ
ಪ್ರಶ್ನಿಸಿ
ನ್ಯಾಯಾಲಯದಲ್ಲಿ
ಅರ್ಜಿ
ಸಲ್ಲಿಸಿದ್ದಾರೆ.












Click it and Unblock the Notifications