ವೈಎಸ್ಆರ್ ನೆನಪಿಗೆ ಪ್ರತಿಮೆಗಳ ಅನಾವರಣ

ವೈಎಸ್ಆರ್ ಸಾವಿನ ಪ್ರಥಮ ಪುಣ್ಯ ತಿಥಿಯ ಪ್ರಯುಕ್ತ ಸೆ. 2 ರಂದು ರಾಜ್ಯಾದ್ಯಂತ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೈಎಸ್‌ಆರ್ ಅವರರಾಜಕೀಯ ಉತ್ತರಾಧಿಕಾರಿಯಾಗಿರುವ ಅವರ ಮಗ ಜಗನ್ಮೋಹನ್ ರೆಡ್ಡಿ ಅವರಿಗೆ ವೈಎಸ್ಆರ್ ಅಭಿಮಾನಿಗಳಂತೂ ಆಂಧ್ರ ಪ್ರದೇಶದ ಉದ್ದಗಲಕ್ಕೂ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೈಎಸ್ಆರ್ ನೆನಪಿಗಾಗಿ ಸುಮಾರು 600 ಪ್ರತಿಮೆಗಳನ್ನು ಕಳೆದ ಮೇ ತಿಂಗಳಿನಿಂದ ಈವರೆಗೆ ಜಗನ್ಮೋಹನ್ ರೆಡ್ಡಿ ಅನಾವರಣಗೊಳಿಸಿದ್ದಾರೆ. ಜಗನ್ಮೋಹನ್ ರೆಡ್ಡಿಗೆ ತನ್ನ ತಂದೆಯ ಬೆಂಬಲಿಗರಿಂದ ದೊರೆಯುತ್ತಿರುವ ಅಪಾರ ಬೆಂಬಲ ಕಂಡು ಕಾಂಗ್ರೆಸ್ ಹೈಕಮಾಂಡ್ ಬೆಚ್ಚಿ ಬಿದ್ದಿರುವುದು ಸುಳ್ಳಲ್ಲ.
ವೈಎಸ್ಆರ್ ಮಹಾನ್ ನಾಯಕರು. ಅವರು ಯಾವತ್ತೂ ನಮ್ಮ ಹೃದಯಗಳಲ್ಲಿ ಯಾವತ್ತಿಗೂ ನೆಲೆಸಿರುತ್ತಾರೆ. ಮುಂದಿನ ತಲೆ ಮಾರಿಗೂ ಅವರು ಮಾದರಿ ನಾಯಕರಾಗಿದ್ದಾರೆ. ಅವರ ಕನಸನ್ನು ನನಸು ಮಾಡುವುದಕ್ಕೆ ನಾವು ಮುನ್ನುಗ್ಗಬೇಕಾಗಿದೆ ಎಂದು ಒದರ್ಪು ಯಾತ್ರೆಯಲ್ಲಿ ಜಗನ್ಮೋಹನ್ ರೆಡ್ಡಿ ಹೇಳುತ್ತಾರೆ.












Click it and Unblock the Notifications