ಸಂಪುಟಕ್ಕೆ ಹೊಸ ಮುಖಗಳು : ಈಶ್ವರಪ್ಪ
ಬೆಂಗಳೂರು,
ಸೆ. 1 : ಭಾರತೀಯ ಜನತಾ ಪಕ್ಷವನ್ನು ಸದೃಢವಾಗಿ ಸಂಘಟಿಸುವಂತಹ ವ್ಯಕ್ತಿಗಳಿಗೆ ಮುಖ್ಯವಾಗಿ ಯುವ ಮುಖಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. id="toptextpromo">ನಗರದ
ರಾಜೇಂದ್ರ ಭವನದಲ್ಲಿ ಬಿಜೆಪಿ, ಎಸ್ಸಿ, ಎಸ್ಪಿ ಘಟಕದ ರಾಜ್ಯ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಪಕ್ಷವನ್ನು ಬೆಳೆಸುವಂತಹ ವ್ಯಕ್ತಿಗಳ ಅವಶ್ಯಕತೆ ಇರುವುದರಿಂದ ಮುಂದಿನ ಸಚಿವ ಸಂಪುಟ ರಚನೆಯಲ್ಲಿ ಹೊಸಬರಿಗೆ ಆಧ್ಯತೆ ಇದೆ ಎಂದರು. id='are-slot-1' class='oiad oi-axt oiadv'> id='top-searched-articles'>ಸೆಪ್ಟೆಂಬರ್
13ರಂದು ನಡೆಯುವ ಗುಲ್ಬರ್ಗಾ ಮತ್ತು ಕಡೂರು ಉಪ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು. ಸಂಪುಟದಲ್ಲಿರುವ ಹಿರಿಯರನ್ನು ಪಕ್ಷದ ಸಂಘಟನೆಗೆ ತೆಗೆದುಕೊಂಡು ಕೆಲವು ಉತ್ಸಾಹಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ಈಶ್ವರಪ್ಪ ವಿವರಿಸಿದರು.











Click it and Unblock the Notifications