ಮುದ್ದೇನಹಳ್ಳಿಯಲ್ಲಿ ಕೈಗಾರಿಕಾ ಕೇಂದ್ರ : ಮೊಯ್ಲಿ

ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನಾಚರಣೆಯಾದ ಸೆಪ್ಟೆಂಬರ್ 15 ರಂದು ಯುವ ಜನಾಂಗಕ್ಕೆ ಕೈಗಾರಿಕಾ ಪರಿಣಿತಿಗಾಗಿ ತರಬೇತಿ ಕೇಂದ್ರವನ್ನು ಆರಂಭಿಸುವ ಮೂಲಕ ಮುದ್ದೇನಹಳ್ಳಿಯನ್ನು ಕೈಗಾರಿಕಾ ಗ್ರಾಮವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಮತ್ತು ಚಿಕ್ಕಬಳ್ಳಾಪುರ ಸಂಸದ ಎಂ ವೀರಪ್ಪ ಮೊಯ್ಲಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಯುಜನತೆಯನ್ನು ತಾಂತ್ರಿಕವಾಗಿ ತರಬೇತಿಗೊಳಿಸುವಂತ ವಿಶ್ವೇಶ್ವರಯ್ಯನವರು ಕಂಡ ಕನಸನ್ನೇ ನನಸು ಮಾಡಲು ಕೇಂದ್ರ ಹೊರಟಿದೆ. ಈ ನಿಟ್ಟಿನಲ್ಲಿ ಮುದ್ದೇನಹಳ್ಳಿಯಲ್ಲಿ ಕೈಗಾರಿಕಾ ತರಬೇತಿ ನೀಡುವ ವಿವಿಧ ಘಟಕ ಮತ್ತು ಕೇಂದ್ರವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಅಲ್ಲದೇ, ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರವುಳ್ಳ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುವುದು. ಪ್ರಸ್ತುತ ವಿಶ್ವೇಶ್ವರಯ್ಯ ಅವರ ಭಾವಚಿತ್ರವುಳ್ಳ ಸ್ಟಾಂಪ್ ಗಳು ಲಭ್ಯವಿದ್ದು, ಇನ್ನು ಲಕೋಟೆಗಳು ಸಿಗಲಿವೆ ಎಂದು ಮೊಯ್ಲಿ ಹೇಳಿದರು.












Click it and Unblock the Notifications