ಯುವ ಛಾಯಾ ಪತ್ರಕರ್ತ ಎಮ್ಎನ್ ವಾಸು ಅಕಾಲಿಕ ಮರಣ

ಅತ್ಯಂತ ವಿನಮ್ರ ಸ್ವಭಾವದವರಾಗಿದ್ದ ವಾಸು ಅವರು ತಂದೆ-ತಾಯಿ ಸಹೋದರರನ್ನು ಅಗಲಿದ್ದಾರೆ. ಪತ್ರಿಕಾ ಛಾಯಾಗ್ರಾಹಕ ವಾಸು ನಿಧನಕ್ಕೆ ದಟ್ಸ್ ಕನ್ನಡ ಹಾಗೂ ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಸಂಘ ತೀವ್ರ ಶೋಕ ವ್ಯಕ್ತಪಡಿಸಿದೆ. ಚಿಕ್ಕ ವಯಸ್ಸಿನ ಸಹದ್ಯೋಗಿಯನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿಯಾಗಿದೆ. ಆತನ ಅತ್ಮಕ್ಕೆ ಶಾಂತಿ ಸಿಗಲೆಂದು ಸಂಘ ಕೋರಿದೆ.
ಉತ್ತಮ ಸ್ನೇಹಿತ, ಪತ್ರಿಕಾ ಸಹೋದ್ಯೋಗಿಯನ್ನು ಕಳೆದುಕೊಂಡಿರುವ ಅನೇಕ ಪತ್ರಕರ್ತರು ವಾಸು ಅವರ ಅಕಾಲಿಕ ಮರಣಕ್ಕಾಗಿ ಕಂಬನಿ ಮಿಡಿದಿದ್ದಾರೆ. ಪತ್ರಿಕೋದ್ಯಮದಲ್ಲಿ ಎಲ್ಲ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದ ವಾಸು ಅವರ ನಿಧನ ಪತ್ರಿಕಾಲೋಕಕ್ಕೆ ತುಂಬಲಾರದ ನಷ್ಟ ಎಂದು ಬೆಂಗಳೂರು ವರದಿಗಾರರ ಸಂಘ ಶೋಕ ವ್ಯಕ್ತಪಡಿಸಿದೆ.
ಅಂತ್ಯ ಸಂಸ್ಕಾರ : ನಗರದ ಮಾಗಡಿ ರಸ್ತೆಯಲ್ಲಿರುವ ಸುಮನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 99450 88467, 93433 27766.












Click it and Unblock the Notifications