ಕಡಲನ್ನು ಪೂಜಿಸಿದ ಮೊಗವೀರರು
ಮಂಗಳೂರು,
ಆ. 25 : ಮೀನುಗಾರಿಕೆಯ ಋತು ಆರಂಭವಾದ ಹಿನ್ನೆಲೆಯಲ್ಲಿ ಕರ್ನಾಟಕ ಮೊಗವೀರ ಸಂಯುಕ್ತ ಕ್ರಿಯಾ ಸಭಾ ಮತ್ತು ಕದ್ರಿ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮೀನುಗಾರರು ಕಡಲುತೀರ ಮತ್ತು ಬೋಟ್ ಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. id="toptextpromo">ತಣ್ಣೀರುಭಾವಿ
ಸಮುದ್ರ ತೀರದಲ್ಲಿ ಏರ್ಪಡಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಮಂಗಳೂರು ಸುತ್ತಮುತ್ತಲಿನ ಮೀನುಗಾರರು ಪಾಲ್ಗೊಂಡಿದ್ದರು. ಮೀನುಗಾರರಿಗೆ ಈ ಋತು ಬಹುಮುಖ್ಯವಾಗಿದ್ದು, ಎಲ್ಲ ಮೀನುಗಾರರು ಕಡಲುತೀರ ಹಾಗೂ ತಮ್ಮತಮ್ಮ ಬೋಟ್ ಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ನಂತರ ಕಡಲಿಗೆ ಇಳಿಯುತ್ತಾರೆ. ಇದು ಬಹುದಿನಗಳಿಂದ ಮಾಡಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಕಡಲು ನಮಗೆ ಅನ್ನ ಹಾಕುವ ದೇವರು, ವರ್ಷಕ್ಕೊಮ್ಮೆ ನಾವು ಎಲ್ಲರೂ ಸೇರಿ ಕಡಲು ಮತ್ತು ಬೋಟ್ ಗಳಿಗೆ ಪೂಜೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ಮೊಗವೀರ ಸಂಘದ ಅಧ್ಯಕ್ಷ ವಾಸುದೇವ ಬೋಳಾರ ಹೇಳುತ್ತಾರೆ. id='are-slot-1' class='oiad oi-axt oiadv'> id='top-searched-articles'>ಇನ್ನೊಂದು
ವಿಶೇಷವೆಂದರೆ, ಮೀನುಗಾರರ ಒಳಿತಿಗಾಗಿ ಪ್ರತಿ ಮೀನುಗಾರರ ಮನೆಯಿಂದ ಹಾಲನ್ನು ತೆಗೆದುಕೊಂಡು ಬಂದು ಕಡಲತೀರಕ್ಕೆ ಶಾಂತಿಪೂಜೆಮಾಡಿಸುವ ಸಂಪ್ರದಾಯವಿದೆ. ಈ ಪೂಜೆಯನ್ನು ಸಹ ಇಂದು ಮಾಡಲಾಯಿತು ಎಂದು ಬೋಳಾರ ಹೇಳಿದರು. ತಣ್ಣೀರುಭಾವಿ ಸಮುದ್ರ ತೀರದಲ್ಲಿ
ಏರ್ಪಡಿಸಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಅರ್ಚರು ಮೀನುಗಾರರ ಏಳ್ಗೆಗಾಗಿ ಕಡಲುತೀರಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಿದರು.












Click it and Unblock the Notifications