ಪ್ರತಿಷ್ಠೆಯ ಮರುಚುನಾವಣೆಗೆ ಆಖಾಡ ಸಿದ್ದ

YSV Datta
ಬೆಂಗಳೂರು, ಆ. 25 : ಚಂದ್ರಶೇಖರ ಪಾಟೀಲ್ ರೇವೂರು (ಗುಲ್ಬರ್ಗ ದಕ್ಷಿಣ) ಮತ್ತು ಕಡೂರು ಕೃಷ್ಣಮೂರ್ತಿ (ಕಡೂರು) ಅವರ ನಿಧನದಿಂದ ತೆರವಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳ ಮರುಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಅಂತಿಮ ದಿನವಾಗಿದೆ. ಪ್ರಮುಖ ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಿದ್ದು ಚುನಾವಣಾ ಕಣ ಬಿಸಿಯೇರತೊಡಗಿದೆ.

ಅನುಕಂಪದ ಅಲೆಯ ಆಧಾರದ ಮೇಲೆ ಪ್ರಯೋಜನ ಪಡೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಆಸಕ್ತಿ ತೋರಿಲ್ಲ. ಮೃತ ಶಾಸಕರ ಪತ್ನಿಯರಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ಕಾರ್ಯಕರ್ತರ ಒತ್ತಡಕ್ಕೆ ಎರಡೂ ಪಕ್ಷಗಳು ಮಣಿಯಲಿಲ್ಲ. ಇದರ ಲಾಭ ಪಡೆಯಲು ಜೆಡಿಎಸ್ ರಣತಂತ್ರ ಹಣೆದಿದ್ದು, ಗುಲ್ಬರ್ಗದಲ್ಲಿ ಚಂದ್ರಶೇಖರ್ ಪಾಟೀಲ್ ರೇವೂರು ಅವರ ಪತ್ನಿ ಅರುಣಾ ರೇವೂರು ಟಿಕೆಟ್ ನೀಡಿದೆ. ಸೆ.13 ರಂದು ಮತದಾನ ನಡೆಯಲಿದೆ. ಸೆ. 16ಕ್ಕೆ ಫಲಿತಾಂಶ ಹೊರಬೀಳಲಿದೆ.

ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂತಿದೆ:

ಗುಲ್ಬರ್ಗ ದಕ್ಷಿಣ

ಕಾಂಗ್ರೆಸ್ - ಡಾ. ಅಜಯ್ ಸಿಂಗ್ ( ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ)
ಬಿಜೆಪಿ - ಶಶಿಲ್ ನಮೋಶಿ
ಜೆಡಿಎಸ್ - ಅರುಣಾ ಪಾಟೀಲ ರೇವೂರು

ಕಡೂರು

ಕಾಂಗ್ರೆಸ್ - ಕೆ ಎಂ ಕೆಂಪರಾಜು ( ದಿ. ಶಾಸಕ ಕೃಷ್ಣಮೂರ್ತಿ ಸಹೋದರ)
ಬಿಜೆಪಿ - ಡಾ. ವೈ. ಸಿ ವಿಶ್ವನಾಥ್
ಜೆಡಿಎಸ್ - ವೈ ಎಸ್ ವಿ ದತ್ತಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+