ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರಕಟ

ಆರಾಧನೆಯ ವಿವರ ಕೆಳಗಿನಂತಿದೆ
ಆ. 25, ಬುಧವಾರ - ಪೂರ್ವಾರಾಧಾನೆ
ಆ. 26, ಗುರುವಾರ - ಮಧ್ಯಾರಾಧಾನೆ
ಆ. 27, ಶುಕ್ರವಾರ - ಉತ್ತರಾರಾಧಾನೆ
ಮಠದ ವತಿಯಿಂದ ಕೊಡಮಾಡುವ 2010ನೇ ಸಾಲಿನ ಪ್ರತಿಷ್ಠಿತ "ಶ್ರೀ ರಾಘವೇಂದ್ರಾನುಗ್ರಹ" ಮತ್ತು "ಆಸ್ಥಾನ ವಿದ್ವಾನ್" ಪ್ರಶಸ್ತಿಯನ್ನು ಶ್ರೀ ಸುಯತೀಂದ್ರ ತೀರ್ಥ ಸ್ವಾಮೀಜಿಯವರು ಪ್ರಕಟಿಸಿದ್ದಾರೆ. ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿಯು ಫಲಕ, ಮಂತ್ರಾಕ್ಷತೆ ಮತ್ತು ಒಂದು ಲಕ್ಷ ರುಪಾಯಿ ನಗದನ್ನು ಹೊಂದಿರುತ್ತದೆ. ಆಸ್ಥಾನ ವಿದ್ವಾನ್ ಪ್ರಶಸ್ತಿಯು ಫಲಕ, ಮಂತ್ರಾಕ್ಷತೆ ಮತ್ತು 25 ಸಾವಿರ ರುಪಾಯಿ ನಗದನ್ನು ಹೊಂದಿರುತ್ತದೆ. ಆಗಸ್ಟ್ 26ರಂದು ಈ ಪ್ರಶಸ್ತಿ ವಿತರಿಸಲಾಗುವುದು. ಈ ಟಿವಿ ಕನ್ನಡ ಮತ್ತು ಸುವರ್ಣ ನ್ಯೂಸ್ ವಾಹಿನಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿವೆ. ಪ್ರಶಸ್ತಿ ಪಡೆದ ಮಹನೀಯರ ಸಂಕ್ಷಿಪ್ತ ವಿವರಣೆ ಇಂತಿದೆ:
"ಶ್ರೀ ರಾಘವೇಂದ್ರಾನುಗ್ರಹ" ಪ್ರಶಸ್ತಿ
![]() | |
| ಗ್ಯಾಲರಿ : ಮಂತ್ರಾಲಯದಲ್ಲಿ ರಾಯರ 339ನೇ ಆರಾಧನೆ | |
![]() | |
ವೇದಾಂತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ದಿವಂಗತ ತಂತ್ರಿಗಳು ಉಡುಪಿಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ ನಿವೃತ್ತ ವೇದಾಂತ ಪ್ರಾಚಾರ್ಯರಾಗಿದ್ದರು. ಸದಾಕಾಲ ಪಾಠ-ಪ್ರವಚನ-ಅನುದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾರಾಯಣ ತಂತ್ರಿಗಳು ಶ್ರೀಮದಾಚಾರ್ಯರ ಸೇವೆಯನ್ನು ಮಾಡಿ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಒಂದು ಸಂಸ್ಥೆ ಮಾಡಬಹುದಾದ ಸೇವೆಯನ್ನು ತಂತ್ರಿಗಳು ನಡೆಸಿ ಮುಂದಿನ ಪೀಳಿಗೆಗೆ ಆದರ್ಶವಾಗಿ ನಿಂತಿದ್ದಾರೆ. ಉಡುಪಿ ಅಷ್ಠಮಠಗಳಿಂದ ಆಸ್ಥಾನ ವಿದ್ವಾಂಸ ಮತ್ತು ವೇದಾಂತ ವಾಚಸ್ಪತಿ ಪ್ರಶಸ್ತಿ ತಂತ್ರಿಯವರಿಗೆ ಲಭಿಸಿದೆ. ಮಂತ್ರಾಲಯ ಮಠದ ವತಿಯಿಂದ ತಂತ್ರಿಗಳಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ಲಭಿಸಿದೆ.
2. ಮಲ್ಲಪ್ಪ ಶಿಂಧೆ, ಬೆಂಗಳೂರು
ಶ್ರೀಮಠದ ಭಕ್ತರಾಗಿರುವ ಶಿಂಧೆ ಹಿಂದೊಮ್ಮೆ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಬಯಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ಆಗ ಕುಟುಂಬದ ಕೆಲ ಸದಸ್ಯರು ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸುವಂತೆ ಕೇಳಿಕೊಂಡರು. ರಾಯರನ್ನು ಪ್ರಾರ್ಥಿಸಿಕೊಂಡ ಶಿಂಧೆಯವರಿಗೆ ಕನಸಿನಲ್ಲಿ ರಾಯರು ಬಂದು ಅವರ ಆರೋಗ್ಯ ಸುಧಾರಿಸಿದ್ದರು ಎನ್ನುವುದು ಶಿಂಧೆ ಕುಟುಂಬದ ನಂಬಿಕೆ. ಅಂದಿನಿಂದ ಶ್ರೀಮಠದ ಭಕ್ತರಾಗಿರುವ ಮಲ್ಲಪ್ಪ ಶಿಂಧೆಯವರಿಗೆ ಈ ಪ್ರಶಸ್ತಿ ನೀಡಲಾಗಿದೆ.
"ಆಸ್ಥಾನ ವಿದ್ವಾನ್" ಪ್ರಶಸ್ತಿ
ಡಾ.ವಿ ಕಮಲಾಕರ ರಾವ್, ರಾಜಮಹೇಂದ್ರಿ
ಪ್ರಖ್ಯಾತ ಮೃದಂಗ ವಾದಕರಾಗಿರುವ ಕಮಲಾಕರ ರಾವ್ ತಮ್ಮ ಐದನೇ ವರ್ಷದಲ್ಲೇ ಮೃದಂಗ ಅಭ್ಯಾಸ ಆರಂಭಿಸಿದ್ದರು. ತಮ್ಮ 13ನೇ ವರ್ಷದಲ್ಲಿ ಪಾಲ್ಘಾಟ್ ಮಣಿ ಐಯ್ಯರ್ ಬಳಿ ಮೃದಂಗ ಅಭ್ಯಾಸ ಮುಂದುವರಿಸಿದ ರಾವ್ ಅವರಿಗೆ ಈ ವರೆಗೆ ಗಣಪತಿ ಸಚ್ಚಿದಾನಂದ ಪ್ರಶಸ್ತಿ, ಪಾಲ್ಘಾಟ್ ಮನಿ ಐಯ್ಯರ್ ಪ್ರಶಸ್ತಿ, ಮೃದಂಗ ಕಲಾ ಶಿರೋಮಣಿ ಪ್ರಶಸ್ತಿ ಲಭಿಸಿದೆ.














Click it and Unblock the Notifications