ದುರಾಸೆಗೆ ಮಗಳನ್ನೇ ಬಲಿಕೊಟ್ಟ ದಂಪತಿಗಳು
ಸೀತಾಪುರ
(ಉ.ಪ್ರ), ಆ. 19 : ರಾತ್ರೋರಾತ್ರಿ ಶ್ರೀಮಂತರಾಗುವ ಉದ್ದೇಶದಿಂದ ಮಂತ್ರವಾದಿಯೊಬ್ಬನ ಮಾತಿಗೆ ಮರುಳಾದ ಬಡ ದಂಪತಿಗಳು ತಮ್ಮ ನಾಲ್ಕು ವರ್ಷದ ಮಗಳನ್ನೇ ಬಲಿಕೊಟ್ಟ ಘಟನೆ ಉತ್ತರಪ್ರದೇಶ ರಾಜ್ಯದ ಸೀತಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ. id="toptextpromo">ಜಿಲ್ಲೆಯ
ದಹೇಲಿಕುಶೆಪಾ ಗ್ರಾಮದ ಶ್ರೀಕೃಷ್ಣ ಮತ್ತು ರಮಾದೇವಿ ದಂಪತಿಗಳು ಸ್ವಯಂ ಘೋಷಿತ ದೇವಮಾನವನೊಬ್ಬನ ಮಾತನ್ನು ನಂಬಿ ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಕಡುಬಡುವರಾಗಿದ್ದ ಇವರನ್ನು ಶ್ರೀಮಂತರಾಗಿಸುವ ಆಮಿಷವೊಡ್ಡಿ ಮಗಳನ್ನು ಬಲಿ ಕೊಡುವಂತೆ ಸಲಹೆ ನೀಡಿದ್ದ. ಈತನ ಪ್ರಭಾವಕ್ಕೆ ಒಳಗಾದ ಇವರುಗಳು ತಮ್ಮ ಮಗಳನ್ನೇ ಬಲಿ ಕೊಟ್ಟು ಈಗ ಪರಾರಿಯಾಗಿದ್ದಾರೆ. ಶಿವಕುಮಾರ ಎನ್ನುವ ದೇವಮಾನವ ಕೂಡ ಈಗ ತಲೆ ಮರೆಸಿಕೊಂಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಪೊಲೀಸರು
ಹೂತಿಟ್ಟ ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ. ಶವದ ಮೇಲೆ ಹರಿತವಾದ ಆಯುಧಗಳಿಂದ ಮಾಡಿದ ಗಾಯ ಮತ್ತು ಸುಟ್ಟ ಗುರುತುಗಳಿವೆ. ಬಾಲಕಿಯನ್ನು ಬಲಿ ಕೊಡುವ ಮುಂಚೆ ಮನೆಯಲ್ಲಿ 'ಬಲಿಪೂಜೆ' ನಡೆಸಿದ್ದು ಸ್ಥಳದಲ್ಲಿ ಅರಸಿನ, ಕುಂಕುಮ, ಹೂ ಮತ್ತು ಊದುಬತ್ತಿಗಳು ಕಂಡುಬಂದಿವೆ ಎಂದು ಸಂಬಂಧಪಟ್ಟ ಠಾಣಾ ಪೋಲಿಸ್ ಅಧಿಕಾರಿಗಳು ಹೇಳಿಕೆನೀಡಿದ್ದಾರೆ.











Click it and Unblock the Notifications