ಬೆಂಗಳೂರು ಸ್ಫೋಟ : ಕೈಗೆ ಸಿಗದ ಮದನಿ
ಕೊಲ್ಲಂ,
ಆ. 17 : ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಬಂಧನ ಅಥವಾ ಶರಣಾಗತಿ ಕುರಿತ ಅಶ್ಚಿತತೆ ಮುಂದುವರಿದಿದೆ. ಆತನ ಬಂಧನಕ್ಕೆ ಅನುವು ಮಾಡಿಕೊಡುವಲ್ಲಿ ಕೇರಳ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಕರ್ನಾಟಕ ಆರೋಪಿಸಿದೆ. id="toptextpromo">ಬೆಂಗಳೂರಿನ
ಇಬ್ಬರು ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ್ದು, ಆತನ ಬಂಧನ ನಿಶ್ಚಿತ ಎಂಬ ಉಹಾಪೋಹಗಳಿಗೆ ಕಾರಣವಾಯಿತು. ಆದರೆ, ಆತನ ಬಂಧನದ ಕುರಿತ ನಿಗೂಢತೆ ಮುಂದುವರಿದಿದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಗುತ್ತದೆ ಎನ್ನುವ ಬಗ್ಗೆ ರಾಜ್ಯದ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. id='are-slot-1' class='oiad oi-axt oiadv'> id='top-searched-articles'>ಮದನಿ
ವಿಷಯದಲ್ಲಿ ಕೇರಳ ಸರಕಾರ ವರ್ತಸುತ್ತಿರುವ ಬಗ್ಗೆ ಗೃಹ ಸಚಿವ ವಿ ಎಸ್ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೇರಳ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ನಾವು ಪರ್ಯಾಯ ಯೋಚನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.











Click it and Unblock the Notifications