ರಾಹುಲ್ ಭಾರತೀಯ ಸಂಸ್ಕೃತಿ ಕಲಿಯಲಿ

Rahul should learn indian culture , R Ashoka
ಮೈಸೂರು, ಆ.15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲು ಈ ಭೂಮಿಯ ಸಂಸ್ಕೃತಿ ತಿಳಿದುಕೊಳ್ಳಲಿ ಎಂದು ರಾಜ್ಯ ಸಾರಿಗೆ ಸಚಿವ ಅಶೋಕ್ ಸಲಹೆ ನೀಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್, ವಿದ್ಯಾರ್ಥಿಯೊಬ್ಬರು 'ಸರ್' ಎಂದು ಸಂಬೋಧಿಸಿದ ವೇಳೆ, ನನ್ನನ್ನು 'ಸರ್ 'ಎನ್ನಬೇಡಿ ರಾಹುಲ್ ಎಂದು ಕರೆಯಿರಿ ಎಂದು ಹೇಳಿದ್ದಾರೆ. ಆದರೆ, ಹೆಸರಿಡಿದು ಕರೆಯುವುದು ನಮ್ಮ ಸಂಸ್ಕೃತಿಯಲ್ಲ. ಅದನ್ನು ರಾಹುಲ್‌ಗಾಂಧಿ ಕಲಿಯಲಿ ಎಂದರು.

ರಾಜಕೀಯದಲ್ಲಿ ಬೆಳೆಯುತ್ತಿರುವ ರಾಹುಲ್‌ಗಾಂಧಿ, ಗಣಿ ವಿಚಾರ ಪ್ರಸ್ತಾಪಿಸುವ ಮೂಲಕ ಪಕ್ಷಪಾತದ ಹೇಳಿಕೆ ನೀಡಿದ್ದಾರೆ. ಆ ರೀತಿಯ ಹೇಳಿಕೆಗಳನ್ನು ನಿಲ್ಲಿಸುವುದು ಒಳ್ಳೆಯದು ಎಂದ ಅಶೋಕ್, ಗಣಿ ವಿಚಾರಕ್ಕೂ ಮುನ್ನ ಕಾಶ್ಮೀರ ಇಂದು ಏನಾಗುತ್ತಿದೆ ಎಂಬ ಬಗ್ಗೆ ರಾಹುಲ್ ಮಾತನಾಡಲಿ ಎಂದು ಸೂಚ್ಯವಾಗಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತೆತ್ತಿದರೆ, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎನ್ನುತ್ತಾರೆ. ಆದರೆ, ರಾಜೀನಾಮೆ ಕೇಳಲು ಇವರು ಯಾರು ಎಂದು ಹರಿಹಾಯ್ದ ಅವರು, ಅಧಿಕಾರ ಬಂದದ್ದು ಜನರಿಂದ ಅವರಿಗೆ ಉತ್ತರಿಸುವ ಸಲುವಾಗಿ ನಾವಿಲ್ಲಿ ಸೇರಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+