ವೀರೇಂದ್ರ ಹೆಗ್ಗಡೆ ಅವರಿಂದ ದಸರಾ ಉದ್ಘಾಟನೆ
ಮೈಸೂರು,
ಆ. 13 : ವಿಶ್ವವಿಖ್ಯಾತ ದಸರಾ ಮಹೊತ್ಸವವನ್ನು ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ನಗರದಲ್ಲಿ ನಡೆದ ದಸರಾ ಉತ್ತಮ ಮಟ್ಟದ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು. id="toptextpromo">ಜಿಲ್ಲಾ
ಉಸ್ತುವಾರಿ ಸಚಿವರು, ಮೇಯರ್ ಸಂಸದರು ಮತ್ತು ಎಲ್ಲಾ ಶಾಸಕರನ್ನು ಒಳಗೊಂಡ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ದಸರಾ ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಹಾಗೆಯೇ ಕೇಂದ್ರ ಪ್ರವಾಸೋಧ್ಯಮ ಸಚಿವೆ ಕುಮಾರಿ ಸೆಲ್ಜಾ ಅವರನ್ನು ಆಹ್ವಾನಿಸುವುದಾಗಿ ಯಡಿಯೂರಪ್ಪ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಸದ್ಯದಲ್ಲೇ
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ರಾಜ ಒಡೆಯರ್ ಅವರಿಗೂ ದಸರೆಗೆ ಅಧಿಕೃತ ಅಹ್ವಾನ ನೀಡಲಾಗುವುದು. ಕಳೆದ ವರ್ಷ ದಸರೆಗೆ 6 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು. ಈ ಬಾರಿಯ ದಸರೆಗೆ 9 ಕೋಟಿ ರುಪಾಯಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವನೆ ಮುಂದಿಟ್ಟಿದೆ. ಇನ್ನೆರಡು ದಿನಗಳಲ್ಲಿ ಮೊದಲ ಹಂತದಲ್ಲಿ 5 ಕೋಟಿ ರುಪಾಯಿಗಳನ್ನು ನೀಡಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications