ಭಾರತದ ವೋಟಿಂಗ್ ಯಂತ್ರ ಸರಿಯಿಲ್ಲ : ಐಟಿ ತಜ್ಞರು

ಇದರೊಂದಿಗೆ ಈ ಕುರಿತು ಸಂಶಯ ವ್ಯಕ್ತಪಡಿಸಿದ್ದ ಬಿಜೆಪಿಯ ಆತಂಕ ನಿಜವಾದಂತಾಗಿದೆ. ಭಾರತೀಯ ಚುನಾವಣಾ ಆಯೋಗ ಜಾರಿಗೆ ತಂದಿರುವ ಈ ಮತದಾನ ಯಂತ್ರಗಳು ಸುರಕ್ಷಿತವಲ್ಲ. ಅಕ್ರಮ ನಿರೋಧಕವಲ್ಲ ಎಂಬುದಾಗಿ ಈ ಕ್ಷೇತ್ರದಲ್ಲಿನ ತಜ್ಞರು, ಐಟಿ ತಜ್ಞರು ಹೇಳಿದ್ದಾರೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ಈ ಮತದಾನ ಯಂತ್ರ ಸುರಕ್ಷಿತ ಎಂದು ಹೇಳಿಕೊಂಡಿದ್ದರೆ,ಐಟಿ ತಜ್ಞರು ಇದನ್ನು ಬಲವಾಗಿ ಆಕ್ಷೇಪಿಸಿ ಈ ಮತಯಂತ್ರಗಳಲ್ಲಿನ ದೋಷಗಳನ್ನು ಆಧಾರಸಹಿತವಾಗಿ ಬಹಿರಂಗಪಡಿಸಿದ್ದರು.
ನವೀನ್ ಚಾವ್ಲಾ ಸಮರ್ಥನೆ :ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತೆ ಅಧಿಕಾರಕ್ಕೆ ಬಂದಾಗಲೇ ಈ ಕುರಿತಂತೆ ಅಚ್ಚರಿ, ಸಂಶಯಗಳು ವ್ಯಕ್ತವಾಗಿದ್ದವು. ಮುಖ್ಯಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಅವರ ನಿಷ್ಪಕ್ಷಪಾತಿ ನಿಲುವಿನ ಬಗೆಗೂ ಅನುಮಾನಗಳು ವ್ಯಕ್ತವಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಈ ಇವಿಎಂಎಸ್‌ಗಳನ್ನು ಜಾರಿಗೆ ತಂದ ಬಳಿಕ ಇದರಲ್ಲಿ ಅನೇಕ ಅಕ್ರಮ ಎಸಗಲು ಸಾಧ್ಯವಿದೆ. ಈ ಬಗ್ಗೆ ತಜ್ಞರ ಸಮಿತಿಯೊಂದರ ಮುಂದೆ ಬಂದ ವಾದ-ಪ್ರತಿವಾದಗಳನ್ನು ಆಲಿಸಿದಾಗ ಇದು ವ್ಯಕ್ತವಾಗಿದೆ. ಇದರಿಂದಾಗಿ ಭಾರತೀಯ ಮತದಾನ ಯಂತ್ರಗಳು ಸಾಕಷ್ಟು ಸುರಕ್ಷೆ, ಪಾರದರ್ಶಕತೆಗಳನ್ನು ಹೊಂದುವಂತೆ ಮಾಡಿ ಮತದಾರರಲ್ಲಿ ವಿಶ್ವಾಸ ತುಂಬಲು ಹೊಸ ಕ್ರಮಗಳ ಅಗತ್ಯವಿದೆ ಎಂದು ಈ ತಜ್ಞರು ಬೊಟ್ಟು ಮಾಡಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯ,ಮೈಕ್ರೋಸಾಫ್ಟ್ ರೀಸರ್ಚ್ ಸೆಂಟರ್ ,ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಎಟಿ ಅಂಡ್‌ಟಿ ಶಾನ್ನೂನ್ ಲ್ಯಾಬ್ಸ್, ಮೇರಿಲ್ಯಾಂಡ್ ವಿಶ್ವವಿದ್ಯಾಲಯಯುನಿರ್ವಸಿಟಿ ಆಫ್ ವಾಟರ್ಲೂ,ಯುನಿರ್ವಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೀ ಕ್ಲೀಯರ್ ಬ್ಯಾಲೆಟ್ ಗ್ರೂಪ್, ಇಲೆಕ್ಷನ್ ಆಡಿಟ್ಸ್‌ನ ಮುಂತಾದ ಪ್ರಮುಖ ಸಂಸ್ಥೆಯ ತಜ್ಞರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಚುನಾವಣಾ ಆಯುಕ್ತ ಅಲೋಕ್ ಶುಕ್ಲಾ, ಮದ್ರಾಸ್ ಐಐಟಿಯ ಮಾಜಿ ನಿರ್ದೇಶಕ ಪಿ.ವಿ.ಇಂದಿರೇಶನ್ ಅವರು ಈ ಮತದಾನ ಯಂತ್ರಗಳಲ್ಲಿ ಸುರಕ್ಷತೆಯ ಕೊರತೆ ಇದೆ ಎಂಬುದನ್ನು ಅಲ್ಲಗಳೆದು, ಇದು ಸಂಪೂರ್ಣ ಸುರಕ್ಷಿತವಾಗಿದೆ. ಇದನ್ನು ಬದಲಾಯಿಸಬೇಕಾದ ಅಗತ್ಯವೇ ಇಲ್ಲ. ಎಲ್ಲ ಆರೋಪಗಳು ಉತ್ಪ್ರೇಕ್ಷಿತವಾಗಿದೆ ಎಂದಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications