ಗಣಿ ಲಂಚ ಹಗರಣ: ನಮಗೆ ಹಿನ್ನಡೆ ಆಗಿಲ್ಲ : ರೆಡ್ಡಿ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನೀಡಿರುವ ಸಲಹೆಯನ್ನು ನಾನು ಸ್ವಾಗತಿಸಿದ್ದೇನೆ. ಪ್ರಕರಣ ವಜಾ ಆಗಿಲ್ಲ. ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಮುಂದುವರೆಸಬಹುದು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಈ ಹಿನ್ನಲೆಯಲ್ಲಿ ನಮ್ಮ ವಕೀಲರು ಪ್ರಕರಣವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಪ್ರಕರಣವನ್ನು ಮುಂದುವರೆಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸುತ್ತೇನೆ. ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ನೀಡಬೇಕೋ ಅಥವಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕೋ ಎನ್ನುವ ವಿಚಾರವನ್ನು ಪಕ್ಷದ ವರಿಷ್ಠರೇ ಸಲಹೆ ನೀಡಲಿದ್ದಾರೆ. ಪಕ್ಷದ ವರಿಷ್ಠರ ಸಲಹೆಯ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಬದುಕಿನ ಕೊನೆಯ ಘಟ್ಟದಲ್ಲಿರುವ ಎಂ.ಪಿ. ಪ್ರಕಾಶ್, ಸುಷ್ಮಾ ಸ್ವರಾಜ್ ಅವರನ್ನು ಟೀಕಿಸುವ ಅಗತ್ಯವೇ ಇರಲಿಲ್ಲ ಎಂದು ಮತ್ತೊಮ್ಮೆ ಅವರಿಗೆ ಸಲಹೆ ನೀಡಿದರು.












Click it and Unblock the Notifications