ಜಲಪಾತಕ್ಕೆ ಬಿದ್ದು ವಿಪ್ರೋ ಟೆಕ್ಕಿ ಸಾವು
ಕೊಳ್ಳೇಗಾಲ,
ಆ.11: ಜಲಪಾತ ವೀಕ್ಷಿಸಲು ಬಂದ ಯುವಕನೊಬ್ಬ ಆಕಸ್ಮಿವಾಗಿ ಕಾಲುಜಾರಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವನಸಮುದ್ರ ಗಗನಚುಕ್ಕಿಯಲ್ಲಿ ನಡೆದಿದೆ. id="toptextpromo">ಬೆಂಗಳೂರು
ವಿಪ್ರೋ ಕಂಪನಿ ಉದ್ಯೋಗಿ ಮಂಜುನಾಥ್(30) ಎಂಬುವನೇ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ದೈವಿ. ಗಗನಚುಕ್ಕಿಯ ದೊಡ್ಡ ಬಂಡೆಯೇರಿ ಜಲಪಾತವನ್ನು ಅತಿ ಸಮೀಪದಿಂದ ವೀಕ್ಷಿಸಲು ಮಂಜುನಾಥ್ ಮುಂದಾದಾಗ ಕಾಲುಜಾರಿ ಜಲಪಾತಕ್ಕೆ ಬಿದ್ದನೆನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ತಮ್ಮ
ಮಗನಿಗೆ ಆತ್ಮಹತ್ಯೆಯ ಯಾವ ಉದ್ದೇಶವಿರಲಿಲ್ಲ. ಆಕಸ್ಮಿಕ ಸಾವಿನಿಂದ ಆಘಾತವಾಗಿದೆ ಎಂದು ಮೃತರ ತಂದೆ ಪ್ರತಿಕ್ರಿಯಿಸಿದ್ದಾರೆ. ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದು, ಶವಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಿದ್ದಾರೆ. ವಾರಾಂತ್ಯದಲ್ಲಿ ಜಲಪಾತ ನೋಡಲು ಬರುವ ಟೆಕ್ಕಿ ಸಮೂಹಕ್ಕೆ ಎಚ್ಚರಿಕೆಯಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ.











Click it and Unblock the Notifications