ಸಾವು ಬಯಸಿ ನ್ಯಾಯ ಬೇಡುತ್ತಿರುವ ಅಜ್ಜಿ

ದಾವಣಗೆರೆ ಮೂಲದ ನಿವೃತ್ತ ಶಿಕ್ಷಕಿಯಾಗಿರುವ ಕರಿಬಸಮ್ಮ ದಯಾಮರಣಕ್ಕೆ ನಿಷಿದ್ದ ಹೇರಿರುವ ಭಾರತೀಯ ದಂಡ ಸಂಹಿತೆ 306 ಮತ್ತು 307 ಕಲಂನಿಂದ ತನಗೆ ವಿನಾಯಿತಿ ನೀಡಬೇಕೆಂದು ನ್ಯಾಯಮೂರ್ತಿ ಅಜಿತ್ ಗುಂಜಾಳ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ದಾವಣಗೆರೆ ಆನಂದ ವೃದ್ದಾಶ್ರಮದಲ್ಲಿ ಬದುಕು ನೂಕುತ್ತಿರುವ ಕರಿಬಸಮ್ಮ ಮೂಳೆಗೆ ಸಂಬಂಧಿಸಿದ ತೀವ್ರ ಸ್ವರೂಪದ ಕಾಯಿಲೆಯಿಂದ ಕಳೆದ 10 ವರ್ಷಗಳಿಂದ ಬಳಲುತ್ತಿದ್ದಾರೆ. ಅವರಿಗೆ 70 ವರ್ಷ.
2003ರಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದ ಕರಿಬಸಮ್ಮ ಪ್ರಧಾನಿ ಕಚೇರಿಗೆ ಪತ್ರ ಕೂಡ ಬರೆದಿದ್ದರು. ತನ್ನ ದೇಹವನ್ನು ದಾವಣಗೆರೆ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಇಚ್ಛೆ ಹೊಂದಿದ್ದಾರೆ. ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇರುವಂತೆ ತನಗೂ ವಿಶೇಷ ಕಾಯಿದೆಯ ಅಡಿ ಅನುಮತಿ ನೀಡಬೇಕೆಂದು ಕರಿಬಸಮ್ಮ ನ್ಯಾಯಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ.
1973ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಜೀವಂತ ಶವವಾಗಿರುವ ಮುಂಬೈ ಮೂಲದ ನರ್ಸ್ ಅರುಣ್ ಶಾನುಭಾಗ್ ಅವರಿಗೆ ದಯಾಮರಣ ನೀಡುವಂತೆ 2009ರಲ್ಲಿ ಪತ್ರಕರ್ತೆ ಪಿಂಕಿ ವಿರಾಣಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಜ್ಯ ಹೈಕೋರ್ಟ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂಥದ್ದೊಂದು ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯದ ಅಭಿಪ್ರಾಯ ಏನು ಎಂಬ ಕುತೂಹಲ ರಾಜ್ಯದ ಜನತೆಯ ಮನಸ್ಸಿನಲ್ಲಿ ಕುಳಿತಿದೆ.
ಓದಲು ಮರೆಯದಿರಿ : ನೀಳ್ಗಥೆ 'ದಯಾಮರಣ'












Click it and Unblock the Notifications