ಪತ್ನಿ ಕೊಲೆ ಹಿಂದೆ ಇನ್ಫಿ ಟೆಕ್ಕಿ ಕೈಚಳಕ?

Infosys Techie Satish Gupta
ಬೆಂಗಳೂರು, ಆ. 11 : ಹುಳಿಮಾವು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಪ್ರಿಯಾ ಗುಪ್ತಾ(27) ಅವರ ಬರ್ಬರ ಹತ್ಯೆಯ ಹಿಂದೆ ಆಕೆಯ ಪತಿ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಸತೀಶ್ ಗುಪ್ತಾ ಮೇಲೆ ಅನುಮಾನದ ಹುತ್ತ ದಟ್ಟವಾಗಿದೆ. ಟೆಕ್ಕಿಯ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪತ್ನಿ ಪ್ರಿಯಾ ಗುಪ್ತಾ ಅವರ ಹತ್ಯೆ ಹಿಂದೆ ಪತಿ ಸತೀಶ್ ಗುಪ್ತಾ ಅವರ ಕೈವಾಡವಿದೆ. ಪ್ರಿಯಾ ಅವರ ಕೊಲೆ ಮಾಡಿದವರು ವೃತ್ತಪರ ಕೊಲೆಗಾರರಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಅಲ್ಲದೇ, ಕೊಲೆ ಮಾಡಿದ ನಂತರ ಕೊಲೆಗಾರರು ಬೂಟು ಮತ್ತು ಜರ್ಕಿನ್ ಗಳನ್ನು ಬಿಟ್ಟು ಹೋಗಿರುವುದು ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಮಂಗಳವಾರ ಬೆಳಗಿನ ಜಾವ ಸತೀಶ್ ಸುಮಾರು 5.30ಕ್ಕೆ ವಾಕಿಂಗ್ ಗೆ ಹೊರಡುತ್ತಾರೆ. ಆದರೆ, ಅವರ ಮನೆಯಲ್ಲಿ ವಾಕಿಂಗ್ ಗೆ ಮೀಸಲಾದ ಮೂರ್ನಾಲ್ಕು ಜೊತೆ ಬೂಟುಗಳಿವೆ. ಅದನ್ನು ಧರಿಸಿದ ಅವರು, ತರಾತುರಿಯಲ್ಲಿ ಚಪ್ಪಲ್ಲುಗಳನ್ನು ಹಾಕಿಕೊಂಡು ವಾಕಿಂಗ್ ಹೋಗಿದ್ದಾರೆ.

ಪೇಪರ್ ಹಾಕುವ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಮನೆಗೆ ಬಂದಿದ್ದಾರೆ ಎಂದು ಪತ್ನಿ ಪ್ರಿಯಾ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ ಸತೀಶ್, ನಾನು ಬರುವವರೆಗೂ ಬಾಗಿಲು ತೆರೆಯಬೇಡ ಎಂದು ಹೇಳಿದ್ದಾನೆ. ಸುಮಾರು 6.30ರ ಹೊತ್ತಿಗೆ ಮನೆಗೆ ಬಂದ ಸತೀಶ್, ಬಾಗಿಲು ಬಡಿದಿದ್ದಾನೆ. ಪತ್ನಿಗೆ ದೂರವಾಣಿ ಕರೆಯನ್ನು ಮಾಡಿದ್ದಾನೆ.

ಆದರೆ, ಪ್ರಿಯಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ವೆಂಕಟೇಶ್ ಲೇಔಟ್ ನಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ ಸತೀಶ್, ಅವರ ಕಾರು ತೆಗೆದುಕೊಂಡು ಆಫೀಸ್ ಗೆ ತೆರಳಿ ಅಲ್ಲಿದ್ದ ಮನೆಯ ಡೂಪ್ಲಿಕೇಟ್ ಕೀ ತೆಗೆದುಕೊಂಡು ಬಂದು ಮನೆಯ ಬಾಗಿಲು ತೆಗೆದಿದ್ದಾನೆ. ಹೀಗಾಗಿ ಕೊಲೆಯನ್ನು ಈ ಕುಟುಂಬವನ್ನು ಚೆನ್ನಾಗಿ ಬಲ್ಲವರೇ ಮಾಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.

ಪೇಪರ್ ಹಾಕುವ ನೆಪದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪ್ರಿಯಾ ಗುಪ್ತಾ ಅವರನ್ನು ಹತ್ಯೆಗೈದು 2 ಲಕ್ಷ ರುಪಾಯಿ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+