ರಸ್ತೆ ನಾಮಕರಣ : ನಿಮ್ಮ ಆಕ್ಷೇಪಣೆ ಇದೆಯೇ?

* ಮಹಾಲಕ್ಷ್ಮೀ ಬಡಾವಣೆ ಎಂಟ್ರನ್ಸ್ ವೃತ್ತಕ್ಕೆ "ಇಸ್ಕಾನ್ ಟೆಂಪಲ್ ವೃತ್ತ"ಎಂದು ನಾಮಕರಣ ಮಾಡುವುದು.
* ಜಯನಗರ 5 ಬಡಾವಣೆಯ 5ನೇ ಮುಖ್ಯರಸ್ತೆಯಿಂದ 11ನೇ ಮುಖ್ಯರಸ್ತೆಯವರೆಗಿನ 36ನೇ ಅಡ್ಡರಸ್ತೆಗೆ "ಪ್ರೊ. ಎಂ. ಗೋಪಾಲಕೃಷ್ಣ ಅಡಿಗ ರಸ್ತೆ" ಎಂದು ನಾಮಕರಣ ಮಾಡುವುದು.
* ಜಯನಗರ 5ನೇ ಮುಖ್ಯರಸ್ತೆಯಿಂದ 11ನೇ ಮುಖ್ಯರಸ್ತೆವರೆಗಿನ 46 ನೇ ಅಡ್ಡರಸ್ತೆಗೆ "ದಾಸವರೇಣ್ಯ ಕನಕದಾಸ ರಸ್ತೆ" ಎಂದು ನಾಮಕರಣ ಮಾಡುವುದು.
* ಜಯನಗರ 5ನೇ ಬಡಾವಣೆಯ 9ನೇ ಮುಖ್ಯರಸ್ತೆಯಿಂದ 46ನೇ ಅಡ್ಡರಸ್ತೆಯವರೆಗಿನ 40ನೇಅಡ್ಡರಸ್ತೆಗೆ "ಸ್ವಾಮಿ ವಿವೇಕಾನಂದ ಮಾರ್ಗ"ಎಂದು ನಾಮಕರಣ ಮಾಡುವುದು.
* ಜೆ.ಪಿ. ನಗರದ (ಆರ್.ವಿ. ದಂತ ಮಹಾ ವಿದ್ಯಾಲಯವಿರುವ) ಮೊದಲನೆ ಹಂತದ 24ನೇ ಮುಖ್ಯರಸ್ತೆಯ 5ನೇ ಅಡ್ಡರಸ್ತೆಗೆ "ಶ್ರೀ ಡಿ.ಎ. ಪಾಂಡು ರಸ್ತೆ"ಎಂದು ನಾಮಕರಣ ಮಾಡುವುದು.
* ಜಯನಗರ 4ನೇ ಬ್ಲಾಕ್‌ನ 32ನೇ ಅಡ್ಡರಸ್ತೆಯಿಂದ 39ನೇ ಅಡ್ಡರಸ್ತೆಯವರೆಗಿನ 16ನೇ ಮುಖ್ಯರಸ್ತೆಗೆ "ಶ್ರೀ ಬಿ.ಎಲ್. ಲಕ್ಕೇಗೌಡ ರಸ್ತೆ"ಎಂದು ನಾಮಕರಣ ಮಾಡುವುದು.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಲಾದ ದಿನಾಂಕ(ಆ.4)ದಿಂದ 30 ದಿನದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು(ಸಾಧ್ಯವಾದಷ್ಟು ಸೆ.2 ರೊಳಗೆ ಸಲ್ಲಿಸಿ) ಎಂದು ಬಿಬಿಎಂಪಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ವೆಬ್ ತಾಣವನ್ನು ನೋಡಬಹುದು.
ಆಕ್ಷೇಪಣೆಗಳನ್ನು ಸಲ್ಲಿಸಬೇಕಾದ ವಿಳಾಸ :
ಆಯುಕ್ತರು,
ಬೃಹತ್ ಬೆಂಗಳೂರುಮಹಾನಗರ ಪಾಲಿಕೆ,
ನರಸಿಂಹರಾಜ ಚೌಕ,
ಬೆಂಗಳೂರು-02












Click it and Unblock the Notifications