ಲಾಲ್ ಬಾಗ್ ನಲ್ಲಿ ಕಣ್ಮನ ತಣಿಸುವ ಹೂ ರಾಶಿ

ಫಲಪುಷ್ಪ ಪ್ರದರ್ಶನದ ಉದ್ಘಾಟನೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ಫಲಪುಷ್ಪ ಪ್ರದರ್ಶನದಿಂದ ರು.80 ಲಕ್ಷ ಆದಾಯಗಳಿಸಲಾಗಿತ್ತು. ಈ ವರ್ಷ ಆದಾಯ ಮತ್ತಷ್ಟು ಹೆಚ್ಚುವುದೆಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.
ಬೆಂಗಳೂರು ಕೆಂಪು ತೋಟದಲ್ಲಿ ಸುಂದರಿಯರು ; ಗ್ಯಾಲರಿ
ಲಾಲ್‌ಬಾಗ್‌ಗೆ ಭೇಟಿ ನೀಡುವ ವಾಯುವಿಹಾರಗಳಿಗೆ ಹಾಗೂ ನೋಡುಗರಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಕ್ ಗಾರ್ಡನ್, ಫುಡ್ ಕೊರ್ಟ್ ಮತ್ತು ಸಂಗೀತ ಕಾರಂಜಿಗಳನ್ನು ಸ್ಥಾಪಿಸಲು ಸಾರ್ವಜನಿಕರ ವಿರೋಧವಿದೆ. ಶೀಘ್ರವೇ ಸಾರ್ವಜನಿಕರ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಲಾಗುವುದೆಂದು ಅವರು ತಿಳಿಸಿದರು.
ರಾಜ್ಯಾದ್ಯಂತ 16 ಸಾವಿರ ಹೆಕ್ಟೆರ್‌ನಲ್ಲಿ ತೋಟಗಾರಿಕೆ ಕ್ಷೇತ್ರಗಳಿವೆ. ಖಾಸಗಿ ಸಹಭಾಗಿತ್ವದಲ್ಲಿ ಕೆಲವು ಕ್ಷೇತ್ರಗಳ ನಿರ್ವಹಣೆ ಮಾಡಲು ಈಗಾಗಲೇ ಟೆಂಡರ್‌ಗಳನ್ನು ಕರೆಯಲಾಗಿದೆ. ಇದರಿಂದಾಗಿ ರೈತರಿಗೆ ಉತ್ತಮ ಹಾಗೂ ಹೊಸ ತಳಿಗಳನ್ನು ಒದಗಿಸಲು ಅನುವಾಗುವುದೆಂದರು.
ರಾಕ್ ಗಾರ್ಡನ್ ತಪ್ಪು ತಿಳುವಳಿಕೆ ಬೇಡ : ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದ ಸಾರಿಗೆ ಸಚಿವ ಆರ್ ಅಶೋಕ್ ಅವರು ಮಾತನಾಡಿ, ಲಾಲ್‌ಬಾಗ್ ಒಂದು ಬಟಾನಿಕಲ್ ಗಾರ್ಡನ್. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಇಚ್ಛೆ ಸರ್ಕಾರಕ್ಕಿಲ್ಲ. ಇಲ್ಲಿ ಬರಲಿರುವ ರಾಕ್ ಗಾರ್ಡನ್ ಬಗ್ಗೆ ತಪ್ಪು ತಿಳುವಳಿಕೆ ಬೇಡ.
ಯಾವುದೇ ಮರ ಗಿಡಗಳನ್ನು ನಾಶಗೊಳಿಸದೆ ಇರುವ ಕಲ್ಲುಗಳ ನಡುವೆಯ ಮತ್ತಷ್ಟು ಮರಗಿಡಗಳನ್ನು ನೆಡಲಾಗುವುದು. ಧ್ವನಿ-ಬೆಳಕು ಕಾರ್ಯಕ್ರಮಗಳಿಂದ ಪಕ್ಷಿಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಯಾವುದಕ್ಕೂ ಸಾರ್ವಜನಿಕರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡಲಾಗುವುದೆಂದು ಅವರು ತಿಳಿಸಿದರು.
ಸಸ್ಯಕಾಶಿಯಲ್ಲಿ ಹೂ ರಾಶಿ : ಗಾಜಿನ ಮನೆಯಲ್ಲಿನ ಇಂಡಿಯಾ ಗೇಟನ್ನು 2 ಲಕ್ಷಕ್ಕೂ ಹೆಚ್ಚು ಕೆಂಪು, ಕಿತ್ತಲೆ, ಬಿಳಿ ಹಳದಿ ಗುಲಾಬಿ ಹೂಗಳಿಂದ ಶೃಂಗರಿಸಲಾಗಿದೆ. ಇದರ ಸುತ್ತಲೂ ತೈವಾನ್ ದೇಶದ ಹಲವು ವರ್ಣದ ಅರ್ಕಿಡ್ಸ್, ಅಂಥೋರಿಯಂ, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಹೈಬ್ರಿಡ್ ಮೆರಿಗೊಲ್ಡ್, ಕಾಕ್ಸ್‌ಕೂಂಬ್, ಡಾಲಿಯ, ಸೆಲೆಷಿಯ, ಜ್ಹಿನಿಯ, ಸಾಲ್ವಿಯ, ಗ್ಲಾಡಿಯೋಲ, ಸ್ವೀಟ್ ಪಿ, ಅಗ್ನೋಲಿಯ, ಕಾರ್ನ್ ಫ್ಲವರ್, ಟ್ಯೂಬ್ ರೊಸ್ ಸೇರಿದಂತೆ ಹಲವು ಬಣ್ಣ-ಬಣ್ಣದ ಹೂಗಳ ವಿನ್ಯಾಸದ ಜೋಡಣೆಯ ಮತ್ತು ವೈವಿಧ್ಯಮಯ ವಾರ್ಷಿಕ ಅಲಂಕಾರಿಕ ಹೂಗಿಡಗಳನ್ನು ಪ್ರದರ್ಶಿಸಲಾಗಿದೆ.
ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications