ಎಂಡೋಸಲ್ಪಾನ್ ಸಂತ್ರಸ್ಥರಿಗೆ ಸುಸಜ್ಜಿತ ಕೇಂದ್ರ
ಕಡಬ(ಬೆಳ್ತಂಗಡಿ),
ಆ. 6 : ತಾಲ್ಲೂಕಿನ ಕೊಕ್ಕಡ, ಪಟ್ರಮೆ ಪರಿಸರದ ಎಂಡೋಸಲ್ಫಾನ್ ಪೀಡಿತರಿಗೆ ಎರಡು ವರ್ಷದೊಳಗೆ ಕೊಕ್ಕಡದಲ್ಲಿ ಸುಸಜ್ಜಿತ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. id="toptextpromo">ಕೊಕ್ಕಡ
ಸಮುದಾಯ ಭವನದಲ್ಲಿ ಗುರುವಾರ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಪುನರ್ವಸತಿ ಕೇಂದ್ರ ನಿರ್ಮಿಸುವ ಕುರಿತು ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಂಡೋಸಲ್ಫಾನ್ ಪೀಡಿತರಿಗೆ 25 ಕೋಟಿ ರುಪಾಯಿಗಳನ್ನು ಘೋಷಿಸಿದ್ದರು. ಅದರ ಅನುಷ್ಠಾನಕ್ಕೆ ಒಂದೂವರೆ ವರ್ಷ ಬೇಕು. ಅಲ್ಲಿಯವರೆಗೆ ಕೊಕ್ಕಡ ಸಮುದಾಯ ಭವನದಲ್ಲೇ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆಯಲಾಗುವುದು. ಇದಕ್ಕೆ ಪೂರಕ ವ್ಯವಸ್ಥೆಗೆ 2 ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'>252
ಕುಟುಂಬಗಳಿಗೆ ಪರಿಹಾರ : ಈಗಾಗಲೇ ಆಯ್ದ 252 ಕುಟುಂಬಗಳಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ನೀಡಲಾಗಿದ್ದು, ತಲಾ 1,000 ಮಾಶಾಸನ ನೀಡಿ ಸಂತ್ರಸ್ಥರ ಬದುಕಿಗೆ ಆಸರೆ ನೀಡಿದೆ. ಮುಂದಿನ ದಿನಗಳಲ್ಲಿ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.











Click it and Unblock the Notifications