ಆರ್ಎಸ್ಎಸ್ ಮುಸ್ಲಿಂ ಮಂಚ್ ಶಾಖೆ ಆರಂಭ
ಬೆಂಗಳೂರು,
ಆ. 5 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಸ್ಲಿಂ ಮಂಚ್ ನ ದಕ್ಷಿಣ ಭಾರತದ ಶಾಖೆಯೊಂದನ್ನು ನಗರದಲ್ಲಿ ಆರ್ಎಸ್ಎಸ್ ಕಾರ್ಯಕಾರಿ ಸಮಿತಿ ಸದಸ್ಯ ಇಂದ್ರೇಶ್ ಅವರು ಬುಧವಾರ ಉದ್ಘಾಟಿಸಿದರು. id="toptextpromo">ಈ
ಸಂಘಟನೆಯ ಸದಸ್ಯರಾಗಿ ದಕ್ಷಿಣ ಭಾರತ ಕಾರ್ಯಕಾರಿ ಮುಖ್ಯಸ್ಥ ಅಬ್ಬಾಸ್ ಅಲಿ ಬೋರಾ, ರಾಜ್ಯಾಧ್ಯಕ್ಷರಾಗಿ ಪಜ್ಲುರ್ ರೆಹಮಾನ್, ಸದಸ್ಯರಾಗಿ ಮೌಲಾನಾ ಅಬ್ದುಲ್, ಅಬ್ಬಾಷರಿ ಸಾಬ್ ನೇಮಕಗೊಂಡಿದ್ದಾರೆ. ಶಾಖೆ ಉದ್ಘಾಟಿಸಿ ಮಾತನಾಡಿದ ಇಂದ್ರೇಶ್, ಜಗಳಗಳನ್ನು ಬಿಟ್ಟು ಜಾತಿ ಭೂತವನ್ನು ಹೊರದೂಡಿ ಭಾರತೀಯರು ಏಕತೆಯಿಂದ ದೇಶದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು. id='are-slot-1' class='oiad oi-axt oiadv'> id='top-searched-articles'>ಇದೇ
ಸಂದರ್ಭದಲ್ಲಿ ಆರ್ಎಸ್ಎಸ್ ಸದಸ್ಯ ಇಂದ್ರೇಶ್ ಅವರನ್ನು ಆರ್ಎಸ್ಎಸ್ ಮುಸ್ಲಿಂ ಮಂಚ್ ಕಾರ್ಯಕಾರಿಣಿಯಿಂದ ಸನ್ಮಾನಿಸಲಾಯಿತು. ಇದರೊಂದಿಗೆ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಆರ್ಎಸ್ಎಸ್ ನ ಮುಸ್ಲಿಂ ಮಂಚ್ ಶಾಖೆಯೊಂದು ಸಕ್ರಿಯವಾಗಿ ಕಾರ್ಯಾರಂಭಗೊಂಡಂತಾಯಿತು.











Click it and Unblock the Notifications