ಅಂತೂ ಇಂತೂ ಆಗಸ್ಟ್ 16ಕ್ಕೆ ಬಿಬಿಎಂಪಿ ಬಜೆಟ್
ಬೆಂಗಳೂರು,
ಆ.5: ಹಲವಾರು ಕಾರಣಗಳಿಂದ ವಿಳಂಬವಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಆಗಸ್ಟ್ 16ರಂದು ಮಂಡನೆಯಾಗುವ ಸಾಧ್ಯತೆಯಿದೆ. ಆಷಾಢ ಮಾಸದ ಕಾರಣ ಬಿಬಿಎಂಪಿ ಆಯವ್ಯಯ ಮಂಡಿಸಲು ಹಿಂದೇಟು ಹಾಕಿತ್ತು. ಬಜೆಟ್ ರೂಪರೇಷೆಗಳು ಈಗಾಲೆ ಸಿದ್ಧವಾಗಿದೆ ಆಗಸ್ಟ್ 16ರ ಶುಭಮುಹೂರ್ತವನ್ನು ನಿಗದಿಪಡಿಸಲಾಗಿದೆ. id="toptextpromo">ಮೂಲಗಳ
ಪ್ರಕಾರ, ಆಗಸ್ಟ್ 9ರಂದು ಬಜೆಟ್ ಮಂಡನೆಯಾಗಬೇಕಿತ್ತು.ಆದರೆ ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿರುವ ಕಾರಣ ಬಜೆಟನ್ನು ಮುಂದೂಡಲಾಗಿದೆ. ಆಗಸ್ಟ್ 12ರಂದು ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆಗಸ್ಟ್ 13 ಶುಭ ದಿನವಲ್ಲ. ಹಾಗಾಗಿ ಕಡೆಗೆ ಆಗಸ್ಟ್ 16ರಂದು ಬಜೆಟ್ ಮಂಡಿಸಲು ಸಿದ್ಧತೆ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಆಗಸ್ಟ್
ಕೊನೆಯ ವೇಳೆಗೆ ಸ್ಥಾಯಿ ಸಮಿತಿಯ ಸದಸ್ಯರ ಸಂಖ್ಯೆಯನ್ನು 7ರಿಂದ 11ಕ್ಕೆ ವಿಸ್ತರಿಸಲಾಗುತ್ತದೆ. ಬಿಬಿಎಂಪಿ ಪಾಲಿಕೆಯಲ್ಲಿ ಮೇಯರ್ ಎಸ್ ಕೆ ನಟರಾಜ್, ಉಪ ಮೇಯರ್ ಎನ್ ದಯಾನಂದ್ ಸೇರಿದಂತೆ ಒಟ್ಟು ಬಿಜೆಪಿಯ 111 ಮಂದಿ ಕೌನ್ಸಿಲರ್ ಗಳಿದ್ದಾರೆ.











Click it and Unblock the Notifications