ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗೆ ಸೌರ ಸುನಾಮಿಯ ಭೀತಿ

By Mahesh
|
Google Oneindia Kannada News

Solar Tsunami
ನ್ಯೂಯಾರ್ಕ್ ,ಆ.4: ಸಾವಿರಾರು ಜನರನ್ನು ಬಲಿತೆಗೆದುಕೊಂಡಿದ್ದ ಸುನಾಮಿ ಈಗ ಇತಿಹಾಸ. ಇಂಥದ್ದೇ ಮತ್ತೊಂದು ಸುನಾಮಿ ಭೀತಿ ಈಗ ವಿಶ್ವಕ್ಕೇ ಎದುರಾಗಿದೆ. ಸೌರ ಸುನಾಮಿಯೊಂದು ಭೂಮಿಗೆ ಅಪ್ಪಳಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.

ವಿಜ್ಞಾನಿಗಳ ಪ್ರಕಾರ ಮಂಗಳವಾರದ ರಾತ್ರಿ ವೇಳೆಗೆ ಅದು ಭೂಮಿಗೆ ಅಪ್ಪಳಿಸಬಹುದೆಂದು ಹೇಳಲಾಗಿದ್ದರೂ, ನೀವು ಇದನ್ನು ಓದುವ ವೇಳೆಗೆ ಅದು ಭೂಮಿಯ ವಾತಾವರಣಕ್ಕೆ ತಾಕಿರಲೂಬಹುದು ಅಥವಾ ಭೂಮಿಯ ತೀರಾ ಸಮೀಪಕ್ಕೆ ಆಗಮಿಸಿದರೂ ಅಚ್ಚರಿಯೇನಿಲ್ಲ.

ಗ್ಯಾಲರಿ:
ಸೌರ ಸುನಾಮಿ ನಂತರದ ಪರಿಣಾಮ

ಸೂರ್ಯನಲ್ಲಿ ಸಂಭವಿಸಿದ ಭಾರೀ (ಆ.1 ಭಾನುವಾರ)ಸ್ಫೋಟವೇ ಈ ಸೌರ ಸುನಾಮಿಗೆ ಕಾರಣ. ಸೂರ್ಯನಲ್ಲಿ ಉಂಟಾದ ಈ ಸ್ಫೋಟವು ಅದರ ಮೇಲ್ಮೈಗೆ ಏರುವಾಗಲೇ ಸುಮಾರು ಭೂಮಿಯ ಗಾತ್ರದಲ್ಲಿತ್ತೆನ್ನಲಾಗಿದೆ. ಹಾಗಾಗಿ ಸೂರ್ಯನ ಆಂತರ್ಯದಲ್ಲಿ ಉಂಟಾದ ಸ್ಫೋಟದ ನೈಜ ಪ್ರಮಾಣ ಇನ್ನೂ ಅಧಿಕವಾಗಿರಬಹುದು. ಈ ಮಹಾಸ್ಫೊ ಟದಿಂದ ಹೊರಟ ಸೌರ ಶಕ್ತಿಯು ಸೆಕೆಂಡಿಗೆ 93 ಮಿಲಿಯ ಮೈಲು ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ.

ಭೂಮಿಗೆ ಹಾನಿ !: ಸೂರ್ಯನಲ್ಲಿ ಸಂಭವಿಸಿದ ಈ ಸ್ಫೋಟದಿಂದ ಹೊರಟ ಸೌರ ಶಕ್ತಿಯ ಅಲೆಯು ನೇರವಾಗಿ ಭೂಮಿಯನ್ನೆ ಗುರಿಯಾಗಿಟ್ಟುಕೊಂಡಿರುವುದರಿಂದ ಅದರಿಂದ ಭೂಮಿಗೆ ಹೆಚ್ಚಿನ ಹಾನಿ ಸಂಭವಿಸಬಹುದೆಂದು ಕೂಡ ಭೀತಿ ಪಡಲಾಗಿದೆ. ಮುಖ್ಯವಾಗಿ ಭೂಮಿಯ ಸುತ್ತ ಇರುವ ಕೃತಕ ಉಪಗ್ರಹಗಳಿಗೆ ಇದು ಭಾರೀ ಹಾನಿಮಾಡಬಲ್ಲ ಶಕ್ತಿ ಹೊಂದಿದೆ. ಹಾಗಾದಲ್ಲಿ ಭೂಮಿಯಲ್ಲಿನ ಸಂಪರ್ಕ ವ್ಯವಸ್ಥೆಯೆಲ್ಲವೂ ಹಾಳಾಗಬಹುದು.

ಸೂರ್ಯನಲ್ಲಿನ ಈ ಸ್ಫೋಟದ ಮಹಾಪ್ರಮಾಣವು ಸೂರ್ಯನ ಸುತ್ತಲಿರುವ ಕಾಂತೀಯ ಶಕ್ತಿ
ವಲಯವನ್ನೆ ಬುಡಮೇಲು ಮಾಡುವಷ್ಟು ಸಾಮರ್ಥ್ಯದ್ದಾಗಿತ್ತು. ಜತೆಗೇ ಇದೇ ರೀತಿಯ ಇನ್ನೂ ಒಂದು ಸ್ಫೋಟವು ಅದರ ಬೆನ್ನಿಗೇ ಸಂಭವಿಸಿತು ಎಂದೂ ವಿಜ್ಞಾನಿಗಳು ಹೇಳುತ್ತಾರೆ.

ಸೂರ್ಯನಿಂದ ಈ ಸೌರ ಸುನಾಮಿ ಹೊರಟ ದೃಶ್ಯವನ್ನು ಪ್ರಬಲ ಟೆಲಿಸ್ಕೋಪ್‌ನಿಂದ ವೀಕ್ಷಿಸಿದ ಜಗತ್ತಿನ ವಿವಿಧೆಡೆಯ ವಿಜ್ಞಾನಿಗಳೆಲ್ಲ ಅದನ್ನು ರೋಚಕ ದೃಶ್ಯ ಎಂದು ಬಣ್ಣಿಸಿದ್ದಾರೆ. ಆಗಸದಲ್ಲಿ ಪಟಾಕಿಗಳ ಸಿಡಿತಕ್ಕೆ ಅದು ಸಮಾನವಾಗಿತ್ತು ಎಂದು ವರ್ಣಿಸಿದ್ದಾರೆ. ಸೌರ ಸುನಾಮಿಯು ಭೂಮಿಯ ವಾತಾವರಣವನ್ನು ಅಪ್ಪಳಿಸುವಾಗ ಧ್ರುವ ಪ್ರದೇಶಗಳಲ್ಲಿ ಕೂಡ ಸುಂದರ ದೃಶ್ಯಾವಳಿ ರೂಪುಗೊಳ್ಳಬಹುದೆಂದು ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದಾರೆ.

2013ರಲ್ಲಿ ಇನ್ನಷ್ಟು ಸುನಾಮಿಗಳು?
ವಿಜ್ಞಾನಿಗಳು 2013ರ ಸುಮಾರಿಗೆ ಸೂರ್ಯನಿಂದ ಇದೇ ಬಗೆಯ ಇನ್ನಷ್ಟು ಸೌರ ಸುನಾಮಿಗಳು ಹೊರಡುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದಾರೆ. ಆ ವೇಳೆಗೆ ಸೂರ್ಯನು ತನ್ನ ಱಗಾಢ ನಿದ್ದೆಯಿಂದೞ ಎಚ್ಚೆತ್ತು ಪ್ರಬಲ ಸೌರಕಾಂತೀಯ ಶಕ್ತಿಗಳನ್ನು ಹೊರಚೆಲ್ಲುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು. ಆದರೆ ಇವು ಭೂಮಿಯ ಸಂಪರ್ಕ ಉಪಗ್ರಹಗಳಿಗೆ ಎಷ್ಟು ಹಾನಿ ಮಾಡಬಲ್ಲವು ಎಂಬುದನ್ನು ಕಾದು ನೋಡಬೇಕಷ್ಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X