ಚಾಮರಾಜನಗರ : ಆ 9ಕ್ಕೆ ಜಿಲ್ಲಾ ಮಟ್ಟದ ಯುವಮೇಳ

ಸಮ್ಮೇಳನದಲ್ಲಿ ಯುವ ಸಂಘಗಳಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ ಯುವಜನ ಮೇಳದಲ್ಲಿ ವಿಜೇತರಿಗೆ ಉಡುಪುಗಳು ಮತ್ತು ಸಂಗೀತ ಸಾಮಾಗ್ರಿಗಳನ್ನು ನೀಡುವುದು, ಕ್ರೀಡಾ ಸಾಮಾಗ್ರಿಗೆಗಳ ವಿತರಣೆ ಜಿಲ್ಲಾ ಯುವ ಪ್ರಶಸ್ತಿ, ಸಂಘದ ಪ್ರಶಸ್ತಿ ಹಾಗೂ ಕ್ರೀಡಾ ಪ್ರಶಸ್ತಿ ನೀಡುವ ಕುರಿತು ಚರ್ಚಿಸಲಾಗುತ್ತದೆ.
ಸಾಮಾಜಿಕ ಮೌಲ್ಯಸಂರಕ್ಷಣೆ, ಗ್ರಾಮ ನೈರ್ಮಲ್ಯ, ಶೈಕ್ಷಣಿಕ, ಆಶ್ರಯ, ಆಹಾರ ಪಡಿತರ ಯೋಜನೆ, ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೋರಬೇಕಾದ ನಿಷ್ಠೆ ಮುಂತಾದ ವಿಷಯಗಳಲ್ಲಿ ಯುವಕರ ಪಾತ್ರ ಎಂಬ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ.
18 ರಿಂದ 35 ವರ್ಷದೊಳಗಿನ ಯುವಕ ಯುವತಿಯರು ನೋಂದಾಯಿತ ಸಂಘಗಳ ಸದಸ್ಯರು ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಬಹುದು ಶಿಬಿರಾರ್ಥಿಗಳಿಗೆ ಪ್ರಯಾಣಭತ್ಯೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾಡಳಿತ ಭವನ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ ಕಛೇರಿ ದೂರವಾಣಿ ಸಂಖ್ಯೆ: 08226-224932 ಅಥವಾ 98802 11027, 92424 11413 ಅನ್ನು ಸಂಪರ್ಕಿಸಲು ಕೋರಿದೆ.
ಗುಂಡ್ಲುಪೇಟೆ ಮಹಿಳಾ ಐಟಿಐ ಪ್ರವೇಶಕ್ಕೆ ಅವಧಿ ವಿಸ್ತರಣೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಿಒಪಿಎ (ಕಂಪ್ಯೂಟರ್) ವೃತ್ತಿ ತರಬೇತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ಪಿಯುಸಿ ಉತ್ತೀರ್ಣರಾಗಿರುವ 14 ರಿಂದ 40 ರ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು (ಮಾಜಿ ಸೈನಿಕರು ಹಾಗೂ ವಿಧವೆಯರಿಗೆ ಗರಿಷ್ಟ 45 ವರ್ಷಗಳು). ಆಸಕ್ತರು ಆಗಸ್ಟ್ 4 ರೊಳಗೆ ರೂ. 20 ಶುಲ್ಕ ಪಾವತಿಸಿ ಅರ್ಜಿ ಪಡೆಯಬಹುದು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 5 ರೊಳಗೆ ಸಲ್ಲಿಸುವಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹೆಚ್ ಪಿ ಶ್ರೀಕಂಠಾರಾಧ್ಯ ತಿಳಿಸಿದ್ದಾರೆ.












Click it and Unblock the Notifications