ಕಾಂಗ್ರೆಸ್ಸಿನದ್ದು ಪಾಪದ ಯಾತ್ರೆ : ಬಿಜೆಪಿ
ದಾವಣಗೆರೆ,
ಆ. 3 : ಸರಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಮೈತ್ರಿಯ ಅಗತ್ಯವೂ ಇಲ್ಲ ಎಂದು ನಾಡಿನ ಜನರಿಗೆ ಸ್ಪಷ್ಟ ಸಂದೇಶ ಸಾರಿದ ಬಿಜೆಪಿಯ ಪ್ರಥಮ ಜನಜಾಗೃತಿ ಸಮಾವೇಶ, ಬೆಂಗಳೂರಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. id="toptextpromo">ಸರಕಾರಿ
ಪ್ರೌಢ ಶಾಲೆ ಮೈದಾನದಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು, ಕಾಂಗ್ರೆಸ್ ಪಾದಯಾತ್ರೆಯನ್ನು ಪಾಪದ ಯಾತ್ರೆ ಎಂದು ಲೇವಡಿ ಮಾಡಿದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಮುಖಂಡರ ಹೆಸರನ್ನು ಮತ್ತೊಮ್ಮೆ ಪ್ರಸ್ತಾಪಿಸಿದರಲ್ಲದೆ ಪಾದಯಾತ್ರೆ ಬಳ್ಳಾರಿ ತಲುಪುವುದರೊಳಗೆ ಸರಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿರುವ ಕಾಂಗ್ರೆಸ್ ನಾಯಕರಿಗೆ ಪ್ರತಿ ಸವಾಲು ಹಾಕಿದರು. id='are-slot-1' class='oiad oi-axt oiadv'> id='top-searched-articles'>ಪಕ್ಷ
ಮತ್ತು ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ನಾನು ಯಾತ್ರೆ ಮಾಡ್ತೀನಿ ಎಂದು ವೀರಾವೇಶದಿಂದ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ, ಆಗಸ್ಟ್ 20ರ ನಂತರ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಮಾವೇಶ ಆಯೋಜಿಸಲಾಗುವುದು. ಈ ಮೂಲಕ ಕಾಂಗ್ರೆಸ್ ದೊಂಬರಾಟವನ್ನು ಬಯಲು ಮಾಡುವುದಾಗಿ ಹೇಳಿದರು.











Click it and Unblock the Notifications