ಗೋಹತ್ಯೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಇಲ್ಲ?

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹಸಚಿವ ವಿಎಸ್ ಆಚಾರ್ಯ, ರಾಜ್ಯಪಾಲರು ಗೋ ಹತ್ಯೆ ನಿಷೇಧ ವಿಧೇಯಕದಲ್ಲಿ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದಾರೆ.ಸದರಿ ಕಾಯ್ದೆ 7 ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಅದರ ಬಗ್ಗೆಯೂ ರಾಜ್ಯಪಾಲರಿಗೆ ವಿವರಿಸಲಾಗುವುದು ಎಂದರು.
ದನ, ಕರು, ಎಮ್ಮೆ, ಹಸು, ಎತ್ತು ಹಾಗೂ ಹಾಲು ಕೊಡುವ ಜಾನುವಾರುಗಳ ಹತ್ಯೆ ನಿಷೇಧ ಸಂಬಂಧ ಸುಪ್ರೀಂಕೊರ್ಟ್ ನ್ಯಾ. ಆರ್ ಸಿ ಲಹೋಟಿ ನೇತೃತ್ವದ ನ್ಯಾಯಪೀಠ ನೀಡಿರುವ ಆದೇಶದ ಪ್ರತಿಯನ್ನು ಒದಗಿಸಲಾಗುವುದು ಎಂದು ಆಚಾರ್ಯ ಹೇಳಿದರು.
ಅಕ್ರಮ ಸಕ್ರಮ ಮಸೂದೆ ಕುರಿತು ಕೋರ್ಟ್ ತಡೆಯಾಜ್ಞೆ ಇದೆ ಎಂದು ರಾಜ್ಯಪಾಲರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ತಡೆಯಾಜ್ಞೆ ಇಲ್ಲ ಎಂದು ಅವರಿಗೆ ಖಾತ್ರಿ ಪಡಿಸಲಾಗುವುದು ಎಂದು ಆಚಾರ್ಯ ಹೇಳಿದರು.












Click it and Unblock the Notifications