ಅದಿರು ಸಾಗಣೆ ಪರ್ಮಿಟ್ ರದ್ದು : ಯಡಿಯೂರಪ್ಪ
ಬೆಂಗಳೂರು,
ಜು. 28 : ರಾಜ್ಯದಿಂದ ಅದಿರು ರಫ್ತು ತಡೆಗಟ್ಟಲು ಬಿಗಿ ಕ್ರಮಕೈಗೊಳ್ಳಲಾಗಿದ್ದು, ಅದಿರು ಸಾಗಣೆಗೆ ನೀಡಲಾದ ಪರ್ಮಿಟ್ ಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. id="toptextpromo">ನಗರದಲ್ಲಿರುವ
ಚಿತ್ರಕಲಾ ಪರಿಷತ್ ನಲ್ಲಿ ಹೇಮಂತ್ ಮಿಶ್ರಾ ಅವರ ಮಹಾಕುಂಭ-2010 ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಅಕ್ರಮ ಗಣಿಗಾರಿಕೆ ಹಾಗೂ ಅದಿರು ರಫ್ತು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ 10 ಬಂದರುಗಳಲ್ಲಿ ಅದಿರು ರಫ್ತು ನಿಷೇಧಿಸಲಾಗಿದೆ. ರಾಜ್ಯದ ಅದಿರು ಇತರೆ ರಾಜ್ಯಗಳ ಮೂಲಕ ರಫ್ತಾಗುವುದನ್ನು ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಅದಿರು ಸಾಗಣೆಗೆ ನೀಡಲಾದ ಪರ್ಮಿಟ್ ಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ನಾಡಿನ
ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಕರೆಯಲಾಗಿದ್ದ ಸುದೀರ್ಘ ಅಧಿವೇಶನವನ್ನು ಅಕ್ರಮ ಗಣಿಗಾರಿಕೆ ನುಂಗಿ ಹಾಕಿತು. ಜನರಿಗೆ ಅನುಕೂಲವಾಗುವ ಮಸೂದೆಗಳಿಗೆ ಮಂಜೂರು ಪಡೆಯಲು ಸಾಧ್ಯವಾಗಲಿಲ್ಲ ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications